ಶನಿವಾರ, ಜೂನ್ 19, 2021
22 °C

ಏಷ್ಯಾಕಪ್: ಫೈನಲ್ ತಲುಪಿದ ಪಾಕಿಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಷ್ಯಾಕಪ್: ಫೈನಲ್ ತಲುಪಿದ ಪಾಕಿಸ್ತಾನ

ಮೀರ್‌ಪುರ (ಪಿಟಿಐ): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ನಾಲ್ಕು ರಾಷ್ಟ್ರಗಳ ಈ ಕ್ರಿಕೆಟ್ ಟೂರ್ನಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಏಕೆಂದರೆ ಗುರುವಾರ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಬಗ್ಗು ಬಡಿದ ಪಾಕ್ ಫೈನಲ್ ತಲುಪಿದೆ. ತನ್ನ ಮೊದಲ ಪಂದ್ಯದಲ್ಲಿ ಲಂಕಾವನ್ನು ಮಣಿಸಿದ್ದ ದೋನಿ ಬಳಗ ಶುಕ್ರವಾರ ಆತಿಥೇಯ ಬಾಂಗ್ಲಾದೇಶ ಎದುರು ಗೆದ್ದರೆ ಫೈನಲ್ ಖಚಿತ.

ಆದರೆ ಗುರುವಾರ ಸಿಂಹಳೀಯ ಪಡೆಯ ಬ್ಯಾಟ್ಸ್‌ಮನ್‌ಗಳು ಪಾಕ್ ಬೌಲರ್‌ಗಳ ಎದುರು ಪ್ರತಿ ರನ್ ಗಳಿಸಲು ಪರದಾಡಿದರು. ಲಂಕಾ ನೀಡಿದ 189 ರನ್‌ಗಳ ಗುರಿಯನ್ನು ಪಾಕ್ 39.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.

ಹಾಗಾಗಿ ಮಿಸ್ಬಾ ಉಲ್ ಹಕ್ ಪಡೆಗೆ ಒಂದು ಬೋನಸ್ ಸೇರಿದಂತೆ ಐದು ಪಾಯಿಂಟ್ ಲಭಿಸಿದವು. ಈ ತಂಡದವರು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಸೋಲಿಸಿದ್ದರು.

ಲಂಕಾ ನೀಡಿದ ಸುಲಭ ಗುರಿ ಎದುರು ಪಾಕ್ ಆರಂಭದಲ್ಲೇ ಆಘಾತಕ್ಕೆ ಒಳಗಾಗಿತ್ತು. ಏಕೆಂದರೆ ಯುವ ವೇಗದ ಬೌಲರ್ ಸುರಂಗ ಲಕ್ಮಲ್ ಅವರ ಪ್ರಭಾವಿ ಬೌಲಿಂಗ್ ದಾಳಿಗೆ ಸಿಲುಕಿ 33 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು.

ಆದರೆ ನಾಯಕ ಮಿಸ್ಬಾ (ಔಟಾಗದೆ 72; 93 ಎಸೆತ, 9 ಬೌಂ, 1 ಸಿ.) ಹಾಗೂ ಉಮರ್ ಅಕ್ಮಲ್ (77; 72 ಎಸೆತ, 7 ಬೌಂ, 2ಸಿ.) ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಇವರಿಬ್ಬರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 152 ರನ್ ಸೇರಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಾಹೇಲ ಜಯವರ್ಧನೆ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯುತ್ತಿರುವ ಮಾಹೇಲ ರನ್ ವೇಗ ಹೆಚ್ಚಿಸುವಆತುರದಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಈ ತಂಡ 32 ರನ್ ಸೇರಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು.

ಇದರಿಂದ ರನ್ ವೇಗಕ್ಕೆ ಕಡಿವಾಣ ಬಿತ್ತು. ಈ ಹಂತದಲ್ಲಿ ಕುಮಾರ ಸಂಗಕ್ಕಾರ (71; 92 ಎಸೆತ, 4 ಬೌಂ, 1 ಸಿ.) ಹಾಗೂ ಉಪುಲ್ ತರಂಗ (57; 74 ಎಸೆತ, 4 ಬೌಂ.) ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಇವರಿಬ್ಬರ ಜೊತೆಯಾಟ ಕಳಚಿ ಬಿದ್ದ ನಂತರ ಲಂಕಾದ ಪರಿಸ್ಥಿತಿ ಅಧೋಗತಿ. ಏಕೆಂದರೆ 27 ರನ್‌ಗಳ ಅಂತರದಲ್ಲಿ ಕೊನೆಯ ಐದು ವಿಕೆಟ್‌ಗಳು ಪತನಗೊಂಡವು.

ವೇಗಿ ಐಜಾಜ್ ಚೀಮಾ (43ಕ್ಕೆ4) ಹಾಗೂ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ (27ಕ್ಕೆ3) ಸಿಂಹಳೀಯ ಪಡೆಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀಲಂಕಾ 45.4 ಓವರ್‌ಗಳಲ್ಲಿ 188

ಮಾಹೇಲ ಜಯವರ್ಧನೆ ಸಿ  ಹಫೀಜ್ ಬಿ ಐಜಾಜ್ ಚೀಮಾ  12

ತಿಲಕರತ್ನೆ ದಿಲ್ಶಾನ್ ಸಿ ಸಯೀದ್ ಅಜ್ಮಲ್ ಬಿ ಐಜಾಜ್ ಚೀಮಾ 20

ಕುಮಾರ ಸಂಗಕ್ಕಾರ ಬಿ ಐಜಾಜ್ ಚೀಮಾ  71

ದಿನೇಶ್ ಚಂಡಿಮಾಲ್ ಸಿ ಯೂನಿಸ್ ಖಾನ್ ಬಿ ಉಮರ್ ಗುಲ್ 00

ಲಹಿರು ತಿರಿಮಾನೆ ಸಿ ಉಮರ್ ಅಕ್ಮಲ್ ಬಿ ಹಮದ್ ಅಜಾಮ್ 07

ಉಪುಲ್ ತರಂಗ ಬಿ ಸಯೀದ್ ಅಜ್ಮಲ್  57

ಫರ್ವೀಜ್ ಮಹಾರೂಫ್ ಸಿ ಮಿಸ್ಬಾ ಬಿ ಸಯೀದ್ ಅಜ್ಮಲ್  02

ನುವಾನ್ ಕುಲಶೇಖರ ಸಿ ಸರ್ಫ್ರಾಜ್ ಬಿ ಉಮರ್ ಗುಲ್  04

ಸೀಕುಗೆ ಪ್ರಸನ್ನ ಔಟಾಗದೆ  05

ಲಸಿತ್ ಮಾಲಿಂಗ ಬಿ ಐಜಾಜ್ ಚೀಮಾ  01

ಸುರಂಗ ಲಕ್ಮಲ್ ಸಿ ನಸೀರ್ ಜೆಮ್‌ಷೆಡ್ ಬಿ ಸಯೀದ್ ಅಜ್ಮಲ್ 00

ಇತರೆ (ಲೆಗ್‌ಬೈ-5, ವೈಡ್-4)  09

ವಿಕೆಟ್ ಪತನ: 1-33 (ಜಯವರ್ಧನೆ; 5.1); 2-43 (ದಿಲ್ಶಾನ್; 7.1); 3-47 (ಚಂಡಿಮಾಲ್; 8.4); 4-65 (ತಿರಿಮಾನೆ; 14.3); 5-161 (ತರಂಗ; 35.3); 6-165 (ಮಹಾರೂಫ್; 37.1); 7-172 (ಕುಲಶೇಖರ; 40.3); 8-182 (ಸಂಗಕ್ಕಾರ; 42.1); 9-187 (ಮಾಲಿಂಗ; 44.4); 10-188 (ಲಕ್ಮಲ್; 45.4).

ಬೌಲಿಂಗ್: ಉಮರ್ ಗುಲ್ 8-1-20-2 (ವೈಡ್-2), ಐಜಾಜ್ ಚೀಮಾ 9-0-43-4 (ವೈಡ್-2), ಮೊಹಮ್ಮದ್ ಹಫೀಜ್ 10-0-40-0, ಹಮದ್ ಅಜಾಮ್ 4-0-21-1, ಸಯೀದ್ ಅಜ್ಮಲ್ 8.4-1-27-3, ಶಾಹೀದ್ ಅಫ್ರಿದಿ 6-0-32-0

ಪಾಕಿಸ್ತಾನ 39.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189

ಮೊಹಮ್ಮದ್ ಹಫೀಜ್ ಸಿ ಚಂಡಿಮಾಲ್ ಬಿ ಸೀಕುಗೆ ಪ್ರಸನ್ನ  11

ನಸೀರ್ ಜೆಮ್‌ಷೆಡ್ ಸಿ ಉಪುಲ್ ತರಂಗ ಬಿ ಸುರಂಗ ಲಕ್ಮಲ್  18

ಯೂನಿಸ್ ಖಾನ್ ಸಿ ಮಹಾರೂಫ್ ಬಿ ಸುರಂಗ ಲಕ್ಮಲ್ 02

ಮಿಸ್ಬಾ ಉಲ್ ಹಕ್ ಔಟಾಗದೆ  72

ಉಮರ್ ಅಕ್ಮಲ್ ಸಿ ತರಂಗ ಬಿ ಫರ್ವೀಜ್ ಮಹಾರೂಫ್  77

ಹಮದ್ ಅಜಾಮ್ ಔಟಾಗದೆ  04

ಇತರೆ (ಲೆಗ್‌ಬೈ-1, ವೈಡ್-2, ನೋಬಾಲ್-2)  05

ವಿಕೆಟ್ ಪತನ: 1-29 (ಜೆಮ್‌ಷೆಡ್; 8.4); 2-31 (ಹಫೀಜ್; 11.2); 3-33 (ಯೂನಿಸ್; 12.5); 4-185 (ಉಮರ್; 38.6)

ಬೌಲಿಂಗ್: ಲಸಿತ್ ಮಾಲಿಂಗ 8-1-44-0, ನುವಾನ್ ಕುಲಶೇಖರ 7-2-22-0, ಸುರಂಗ ಲಕ್ಮಲ್ 8-1-37-2 (ನೋಬಾಲ್-2), ಸೀಕುಗೆ ಪ್ರಸನ್ನ 7.5-1-49-1, ಫರ್ವೀಜ್ ಮಹಾರೂಫ್ 7-0-23-1 (ವೈಡ್-2), ತಿಲಕರತ್ನೆ ದಿಲ್ಶಾನ್ 2-0-13-0

ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 6 ವಿಕೆಟ್ ಗೆಲುವು. ಪಾಯಿಂಟ್: ಪಾಕ್-5, ಶ್ರೀಲಂಕಾ-0. ಪಂದ್ಯ ಶ್ರೇಷ್ಠ: ಐಜಾಜ್ ಚೀಮಾ.  ಪಾಕ್‌ನ ಮುಂದಿನ ಪಂದ್ಯ: ಭಾರತ ಎದುರು (ಮಾರ್ಚ್ 18). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.