ಏಷ್ಯಾಕಪ್ ಹಾಕಿ ಚಾಂಪಿಯನ್‌ಷಿಪ್: ಸೆಮಿಫೈನಲ್‌ಗೆ ಭಾರತ

ಮಂಗಳವಾರ, ಜೂಲೈ 23, 2019
27 °C

ಏಷ್ಯಾಕಪ್ ಹಾಕಿ ಚಾಂಪಿಯನ್‌ಷಿಪ್: ಸೆಮಿಫೈನಲ್‌ಗೆ ಭಾರತ

Published:
Updated:

ಬ್ಯಾಂಕಾಕ್ (ಪಿಟಿಐ): ಗೆಲ್ಲಲೇಬೇಕಾದ ಒತ್ತಡವನ್ನು ಮೆಟ್ಟಿ ನಿಂತ ಭಾರತ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಆರನೇ ಜೂನಿಯರ್ ಮಹಿಳಾ ಏಷ್ಯಾಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.ಹಿಂದಿನ ಪಂದ್ಯದಲ್ಲಿ ಚೀನಾ ಎದುರು ಸೋಲು ಕಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯವಿತ್ತು. ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 2-1ಗೋಲುಗಳಿಂದ ಮಲೇಷ್ಯ ತಂಡವನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತು. `ಎ~ ಗುಂಪಿನಲ್ಲಿರುವ ಭಾರತ ಎರಡನೇ ಸ್ಥಾನ ಪಡೆದರೆ, ಚೀನಾ ಅಗ್ರಸ್ಥಾನ ಗಳಿಸಿದೆ.ಮೊದಲಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ದ್ವಿತೀಯಾರ್ಧದ ಆರಂಭದ ನಿಮಿಷದಲ್ಲಿಯೇ ಮಲೇಷ್ಯಾದ ನೊರಾಜ್ಲಿನ್ ಸುಮಂತ್ರಿ ಗೋಲಿನ ಖಾತೆ ತೆರೆದರು. ಇದಕ್ಕೆ ತಿರುಗೇಟು ನೀಡಿದ ಭಾರತದ ಅನೂಪ್ ಬಾರ್ಲಾ 52ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 1-1ರಲ್ಲಿ ಸಮಬಲ ಸಾಧಿಸಿದರು. ಪೆನಾಲ್ಟಿ ಕಾರ್ನರ್ ಅವಕಾಶವನ್ನು 65ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿದ ನಾಯಕಿ ರಿತು ರಾಣಿ ಭಾರತದ ಸಂಭ್ರಮಕ್ಕೆ ಕಾರಣರಾದರು.ಗುರುವಾರ (ಜುಲೈ 5) ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ, `ಬಿ~ ಗುಂಪಿನಲ್ಲಿರುವ ಕೊರಿಯಾ ಅಥವಾ ಜಪಾನ್ ತಂಡದ ಎದುರು ಪೈಪೋಟಿ ನಡೆಸಲಿದೆ. ಒಟ್ಟು ನಾಲ್ಕು ಪಂದ್ಯಗಳನ್ನಾಡಿರುವ ಭಾರತಕ್ಕೆ ಲಭಿಸಿದ ಮೂರನೇ ಗೆಲುವು ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಸಿಂಗಪುರ ತಂಡವನ್ನು ಮಣಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry