ಏಷ್ಯಾಕಪ್ ಹಾಕಿ: ಸೆಮಿಫೈನಲ್‌ನಲ್ಲಿ ಎಡವಿದ ಭಾರತ

7

ಏಷ್ಯಾಕಪ್ ಹಾಕಿ: ಸೆಮಿಫೈನಲ್‌ನಲ್ಲಿ ಎಡವಿದ ಭಾರತ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಚಾಂಪಿಯನ್ ಭಾರತ ತಂಡದವರು ಮಲೇಷ್ಯಾದಲ್ಲಿ ನಡೆಯುತ್ತಿರುವ ಏಳನೇ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಘಾತ ಅನುಭವಿಸಿದ್ದಾರೆ.

ಮಲಕ್ಕಾದ ಎಂಬಿಎಂ ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಮಲೇಷ್ಯಾ ತಂಡ 2-0 ಗೋಲುಗಳಿಂದ  ಭಾರತವನ್ನು ಮಣಿಸಿತು.ಭಾರತ ಆಕ್ರಮಣಕಾರಿಆಟದ ಮೂಲಕ ಗೋಲು ಗಳಿಸಲು ತುಂಬಾ ಪ್ರಯತ್ನ ನಡೆಸಿತು. ಆದರೆ ವಿರಾಮದವರೆಗೆ ಯಾವುದೇ ಗೋಲು ಬರಲಿಲ್ಲ. ದ್ವಿತೀಯಾರ್ಧದಲ್ಲಿ ಭಾರತ ಎಸಗಿದ ತಪ್ಪುಗಳನ್ನು ತನ್ನಡವಾಳವನ್ನಾಗಿಸಿಕೊಂಡ ಆತಿಥೇಯ ತಂಡ ಎರಡು ಗೋಲು ಗಳಿಸಿತು. ಈ ಮೂಲಕ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.ಮಲೇಷ್ಯಾ ತಂಡದ ಫೈಜಲ್ ಸಾರಿ 40ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹಾಗೂ 66ನೇ ನಿಮಿಷದಲ್ಲಿ ಮೊಹಮ್ಮದ್ ಶಮಿ ಗೋಲು ತಂದಿತ್ತರು. ಈ ತಂಡ ಎರಡನೇ ಗೋಲು ಗಳಿಸಿದಾಗ ಭಾರತ ತಂಡದಲ್ಲಿ ಆಡುತ್ತಿದ್ದವರ ಸಂಖ್ಯೆ ಕೇವಲ 10. ಏಕೆಂದರೆ ರಕ್ಷಣಾ ಆಟಗಾರ ಸುಖ್‌ಮನ್‌ಪ್ರೀತ್ ಹಸಿರು ಕಾರ್ಡ್ ಪಡೆದು ಹೊರನಡೆದಿದ್ದರು.3 ಹಾಗೂ 4ನೇ ಪ್ಲೇ ಆಫ್ ಸ್ಥಾನಕ್ಕಾಗಿ ಭಾರತ ಭಾನುವಾರ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry