ಏಷ್ಯಾ ಪೆಸಿಫಿಕ್‌ಗೆ ರಫ್ತು: ಚಹಾ ಮಂಡಳಿ ಚಿಂತನೆ

7

ಏಷ್ಯಾ ಪೆಸಿಫಿಕ್‌ಗೆ ರಫ್ತು: ಚಹಾ ಮಂಡಳಿ ಚಿಂತನೆ

Published:
Updated:

ಸಿಂಗಪುರ (ಪಿಟಿಐ): ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳಿಗೆ ಚಹಾವನ್ನು ರಫ್ತು ಮಾಡುವುದಕ್ಕೆ ಸಿಂಗಪುರವನ್ನು ವೇದಿಕೆಯನ್ನಾಗಿ ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ಭಾರತೀಯ ಚಹಾ ಮಂಡಳಿ ತಿಳಿಸಿದೆ.ಇಲ್ಲಿ ಸೋಮವಾರ ಖರೀದಿದಾರರ-ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಂಡಳಿಯ ಉಪಾಧ್ಯಕ್ಷೆ ರಶ್ಮಿ ಸೆನ್, ಭಾರತದ ಮಟ್ಟಿಗೆ ಸಿಂಗಪುರ ಚಹಾ ಮಾರುಕಟ್ಟೆ ಸಣ್ಣದು, ಆದರೆ ಏಷ್ಯಾ ಪೆಸಿಫಿಕ್ ಭಾಗಕ್ಕೆ ಹಣಕಾಸು ಮತ್ತು ವ್ಯಾಪಾರದ ಕೇಂದ್ರವಾಗಿ ಸಿಂಗಪುರವನ್ನು ಮಾಡಿಕೊಂಡು ಚಹಾ ರಫ್ರಿಗೆ ಉತ್ತಮ ಅವಕಾಶ ಇದೆ. ಇದನ್ನು ಭಾರತ ಬಳಸಿಕೊಳ್ಳಲಿದೆ ಎಂದರು. ಸದ್ಯ ಈ ಭಾಗಕ್ಕೆಲ್ಲ ಚೀನಾದ ಚಹಾ ರಫ್ತಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry