ಏಷ್ಯಾ ಸಾಹಿತ್ಯ ಪ್ರಶಸ್ತಿ ಅನಂತಮೂರ್ತಿ ಕೃತಿ ನಾಮಕರಣ

7

ಏಷ್ಯಾ ಸಾಹಿತ್ಯ ಪ್ರಶಸ್ತಿ ಅನಂತಮೂರ್ತಿ ಕೃತಿ ನಾಮಕರಣ

Published:
Updated:

ನವದೆಹಲಿ (ಐಎಎನ್‌ಎಸ್):  ದಕ್ಷಿಣ ಏಷ್ಯಾ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ `ಡಿಎಸ್‌ಸಿ-2012~ಗೆ ಖ್ಯಾತ ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ತಬಿಶ್ ಖೈರ್ ಹಾಗೂ ಚಂದ್ರಕಾಂತ್ ಸೇರಿದಂತೆ ಆರು ಮಂದಿ ನಾಮಾಂಕಿತಗೊಂಡಿದ್ದಾರೆ.ಪ್ರಶಸ್ತಿ ಐವತ್ತು ಸಾವಿರ ಡಾಲರ್ ನಗದು ಒಳಗೊಂಡಿದ್ದು, 2012ರ ಜನವರಿಯಲ್ಲಿ ಜೈಪುರದಲ್ಲಿ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪಾಕ್‌ನ ಯುವ ಬರಹಗಾರ ಎಚ್.ಎಂ.ನಕ್ವಿ ಅವರ `ಹೋಂ ಬಾಯ್~ ಕೃತಿಗೆ ಕಳೆದ ವರ್ಷದ ಪ್ರಶಸ್ತಿ ಲಭಿಸಿತ್ತು.

ಅನಂತಮೂರ್ತಿ ಅವರ `ಭಾರತೀಪುರ~, ಚಂದ್ರಕಾಂತ್ ಅವರ `ಎ ಸ್ಟ್ರೀಟ್ ಇನ್ ಶ್ರೀನಗರ್~, ಉಷಾ ಕೆ.ಆರ್ ಅವರ `ಮಂಕಿ ಮ್ಯಾನ್~, ಶಹನಾ ಕರುಣತಿಲಕ ಅವರ `ಚಿನಾಮ: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ~, ತಬಿಶ್ ಖೈರ್ ಅವರ `ದಿ ಥಿಂಗ್ ಅಬೌಟ್ ಥಗ್ಸ್~ ಮತ್ತು ಕಾವೇರಿ ನಂಬೀಶನ್ ಅವರ `ದಿ ಸ್ಟೋರಿ ದಟ್ ಮಸ್ಟ್ ನಾಟ್ ಬಿ ಟೋಲ್ಡ್~ ಕೃತಿಗಳು ಪ್ರಶಸ್ತಿಗೆ ನಾಮಕರಣವಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry