ಏಸಸ್: ಅತಿ ತೆಳ್ಳನೆಯ ನೋಟ್‌ಬುಕ್

7

ಏಸಸ್: ಅತಿ ತೆಳ್ಳನೆಯ ನೋಟ್‌ಬುಕ್

Published:
Updated:
ಏಸಸ್: ಅತಿ ತೆಳ್ಳನೆಯ ನೋಟ್‌ಬುಕ್

ಬೆಂಗಳೂರು:  ಏಸಸ್ ಟೆಕ್ನಾಲಜಿ ಸಂಸ್ಥೆಯು ಅತ್ಯಂತ ತೆಳ್ಳನೆಯ (ಅಲ್ಟ್ರಾ ಥಿನ್) ನೋಟ್‌ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. `ಏಸಸ್ ಎಕ್ಸ್101~ ಹೆಸರಿನ ಈ ನೋಟ್‌ಬುಕ್ `ಇಂಟೆಲ್ ಮೀಗೋ ಆಪರೇಟಿಂಗ್ ಸಿಸ್ಟಮ್~ನಿಂದ ಕಾರ್ಯನಿರ್ವಹಿಸಲಿದೆ.1 ಕೆ.ಜಿ.ಗಿಂತ ಕಡಿಮೆ ತೂಕದ ಈ ನೋಟ್‌ಬುಕ್, 17.5 ಮಿಲಿ ಮೀಟರ್‌ನಷ್ಟು ತೆಳುವಾಗಿದೆ. ಇದಕ್ಕೆ ಯಾವುದೇ ವೈರಸ್ ನಿರೋಧಕ ಸಾಫ್ಟ್‌ವೇರ್‌ನ ಅಗತ್ಯವಿಲ್ಲ ಎಂಬುದು ವಿಶೇಷ. ಇದರ ಬೆಲೆ ರೂ12,499.ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ನೋಟ್‌ಬುಕ್ ಅನ್ನು ಬಿಡುಗಡೆ ಮಾಡಿ, ಮಾತನಾಡಿದ ಏಸಸ್ ಟೆಕ್ನಾಲಜಿ ಸಂಸ್ಥೆಯ (ಭಾರತ) ಮುಖ್ಯಸ್ಥ ಅಲೆಕ್ಸ್ ಹೌಂಗ್, `ಗ್ರಾಹಕರಿಗೆ ಅತ್ಯುತ್ತಮ ಅನುಭವ ಸಿಗುವ ಹಾಗೆ ಹೊಸ ನೋಟ್‌ಬುಕ್‌ನಲ್ಲಿ ಪರಿಕರಗಳನ್ನು ಅಳವಡಿಸಲಾಗಿದೆ~ ಎಂದರು.`ಹೊಸ ಉತ್ಪನ್ನವು ವೈಯಕ್ತಿಕ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಅಲೆಗೆ ಕಾರಣವಾಗಲಿದೆ. ಜಗತ್ತಿನಾದ್ಯಂತ 10 ಸಾವಿರ ಉದ್ಯೋಗಿಗಳು, 3000 ಎಂಜಿನಿಯರುಗಳನ್ನು ಹೊಂದಿರುವ ಏಸಸ್ ಕಂಪೆನಿಯು 2010ರಲ್ಲಿ 10.1 ಶತಕೋಟಿ ಡಾಲರ್‌ಗಳಷ್ಟು ಲಾಭ ಗಳಿಸಿದೆ~ ಎಂದು ವಿವರಿಸಿದರು.ಇಂಟೆಲ್ ದಕ್ಷಿಣ ಏಷ್ಯಾದ ಹೊಸ ವಹಿವಾಟು ವಿಭಾಗದ ನಿರ್ದೇಶಕ ಪ್ರಶಾಂತ್ ಆದಿರಾಜು ಮಾತನಾಡಿ, `10.1 ಇಂಚಿನ ಮಾನಿಟರ್, ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್, ಬ್ಲೂಟೂಥ್, ವೈ ಫೈ ಮೊದಲಾದ ಸೌಕರ್ಯಗಳನ್ನು ಈ ನೋಟ್‌ಬುಕ್ ಹೊಂದಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry