ಶುಕ್ರವಾರ, ಮೇ 27, 2022
23 °C

ಏಸ್ ಅಪ್ಪಚ್ಚಿ : ಒಬ್ಬನ ಸಾವು, 18 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಮದುವೆ ಮನೆಯಿಂದ ಹಿಂತಿರುಗುತ್ತಿದ್ದ ಟಾಟಾ ಏಸ್ ವಾಹನದ ಹಿಂದೆ ಮತ್ತು ಮುಂದೆಯಿಂದ ಬಸ್‌ಗಳೆರಡು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟು 18 ಮಂದಿ ಗಾಯಗೊಂಡ ಘಟನೆ ಗುಲ್ಬರ್ಗ- ಹುಮಾನಾಬಾದ್ ರಸ್ತೆಯ (ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ) ಚಿಂದಿ ಬಸವನ ಗುಡಿ ಇಳಿಜಾರು ಬಳಿ ಗುರುವಾರ ಸಂಜೆ ಸಂಭವಿಸಿದೆ.ಗುಲ್ಬರ್ಗದಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಎನ್‌ಇಕೆಆರ್‌ಟಿಸಿ ಬಸ್ ಹಾಗೂ ಹುಮನಾಬಾದ್‌ನಲ್ಲಿ ಮದುವೆ ಮುಗಿಸಿ ಕುರಿಕೋಟಾಕ್ಕೆ ವಾಪಾಸ್ಸಾಗುತ್ತಿದ್ದವರ ಟಾಟಾ ಏಸ್ ವಾಹನವು ಡಿಕ್ಕಿಯಾಗಿದೆ. ಇದೇ ವೇಳಗೆ ಬಸವಕಲ್ಯಾಣದಿಂದ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದ ಇನ್ನೊಂದು ಬಸ್, ಟಾಟಾ ಏಸ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಟಾಟಾ ಏಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಂದಿಯು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಕುರಿಕೋಟಾ ನಿವಾಸಿ ರಾಜಶೇಖರ್ ವೀರಭದ್ರಯ್ಯ ಸ್ವಾಮಿ (55) ಮೃತಪಟ್ಟಿದ್ದಾರೆ. ಕುರಿಕೋಟಾ ಮೂಲದ ಮಲ್ಲಮ್ಮ, ಚಂದ್ರಕಲಾ, ಶ್ರುತಿ, ಹೇಮಾವತಿ, ರಾಜಕುಮಾರ, ಪ್ರೀತಿ ಎಂಬವರು ಗಂಭೀರವಾಗಿದ್ದು, ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು `108 ಆಂಬುಲೆನ್ಸ್~ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ  ಸಿಪಿಐ ವಿಜಯಲಕ್ಷ್ಮೀ, ಸಬ್‌ಇನ್ಸ್‌ಪೆಕ್ಟರ್ ಶಾಂತಿನಾಥ, ಎಎಸ್‌ಐ ಸಿದ್ರಾಮಪ್ಪ ಭೇಟಿ ನೀಡಿದರು. ಕಮಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.