ಏ. 15ರಿಂದ ಪ್ರಣವ್ 3ದಿನ ಈಶಾನ್ಯ ರಾಜ್ಯಗಳ ಪ್ರವಾಸ

7

ಏ. 15ರಿಂದ ಪ್ರಣವ್ 3ದಿನ ಈಶಾನ್ಯ ರಾಜ್ಯಗಳ ಪ್ರವಾಸ

Published:
Updated:

ನವದೆಹಲಿ (ಐಎಎನ್‌ಎಸ್):ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೋಮವಾರದಿಂದ ಮೂರು ದಿನಗಳವರೆಗೆ ಮಣಿಪುರ ಮತ್ತು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಭಾನುವಾರ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಇಂಫಾಲ್‌ನಲ್ಲಿನ ಅದಿಮ್‌ಜತಿ ಶಿಕ್ಷಾ ಆಶ್ರಮದ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಅವರು ಭಾಗವಹಿಸಲಿದ್ದಾರೆ. ನಂತರ ಎಸ್/ಎಸ್‌ಟಿ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ಹಾಗೂ ಬುಡಕಟ್ಟು  ಬಾಲಕರ ಹಾಸ್ಟೆಲ್ ಮತ್ತು ಮಹಿಳಾ ಕೆಲಸಗಾರರ ಹಾಸ್ಟೆಲ್ ಕಟ್ಟಡಗಳ ಅಡಿಗಲ್ಲು ಸ್ಥಾಪನೆ ಸೇರಿದಂತೆ ಮೂರು ದಿನ ಈಶಾನ್ಯ ರಾಜ್ಯಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಣವ್ ಭಾಗವಹಿಸಲಿದ್ದಾರೆ ಎಂದು ರಾಷ್ಟಪತಿ ಭವನದ ಮೂಲಗಳು ತಿಳಿಸಿವೆ.ಏ. 17ರಂದು ರಾಷ್ಟ್ರಪತಿ ಅವರು ದೆಹಲಿಗೆ ಹಿಂದಿರುಗುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry