ಏ. 29ರಂದು ಕಸಾಪ ಚುನಾವಣೆ?

7

ಏ. 29ರಂದು ಕಸಾಪ ಚುನಾವಣೆ?

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 29ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ.ಏಪ್ರಿಲ್ 29ರ (ಭಾನುವಾರ) ವೇಳೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಅಲ್ಲದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಬೇಕಿರುವ ಉಪಚುನಾವಣೆ ಕೂಡ ಆ ದಿನ ಇರುವುದಿಲ್ಲ. ಬೇರೆ ಯಾವುದೇ ಚುನಾವಣೆ ಅಥವಾ ಉಪ ಚುನಾವಣೆ ಅಂದು ನಡೆಯುವುದಿಲ್ಲ ಎಂಬ ಮಾಹಿತಿ ಪಡೆದುಕೊಂಡ ಕಸಾಪ ಚುನಾವಣಾ ಅಧಿಕಾರಿ ಎಸ್.ಟಿ. ಮೋಹನರಾಜು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮತದಾರರ ಕರಡು ಪಟ್ಟಿಯನ್ನು `ಕಸಾಪ~ದ ಜಿಲ್ಲಾ ಘಟಕಗಳಿಗೆ ಕಳುಹಿಸಲಾಗಿದ್ದು, ಪರಿಷತ್ತಿನ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಕರಡು ಪಟ್ಟಿಯನ್ನು ಪರಿಶೀಲಿಸಿದ ನಂತರ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ.ಇದೇ ವೇಳೆ, ಚಿತ್ರನಟ ಅಶೋಕ್ ಅವರೂ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಅವರು 1991ರಿಂದ ಪರಿಷತ್ತಿನ ಸದಸ್ಯರಾಗಿದ್ದಾರೆ.ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಅಶೋಕ್, `2014-15ನೇ ಇಸವಿ ಪರಿಷತ್ತಿನ ಪಾಲಿಗೆ ಶತಮಾನೋತ್ಸವ ವರ್ಷ. ಮುಂಬರುವ ಚುನಾವಣೆಯಲ್ಲಿ ಆರಿಸಿ ಬರುವ ಅಧ್ಯಕ್ಷರ ಅವಧಿಯಲ್ಲೇ ಈ ಸಂಭ್ರಮ ಎದುರಾಗಲಿದೆ. ಅದರ ನೆನಪಿಗಾಗಿ ಶತಮಾನೋತ್ಸವ ಗ್ರಾಮ ನಿರ್ಮಿಸುವ ಅಂಶವನ್ನು ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದೇನೆ~ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry