ಮಂಗಳವಾರ, ಜೂನ್ 22, 2021
27 °C

ಏ. 6ರಂದು ಅಂತರರಾಜ್ಯ ಮುಕ್ತ ವಾಲಿಬಾಲ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಬೆಟ್ಟಗೇರಿಯ ಟೌನ್‌ಕೌಂಟಿ ಕ್ಲಬ್‌ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಏಪ್ರಿಲ್‌ 6ರಂದು ಭಾನುವಾರ ಅಂತರರಾಜ್ಯ ಮುಕ್ತ ವಾಲಿಬಾಲ್‌ ಟೂರ್ನಿ ನಡೆಯಲಿದೆ.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೌನ್‌ ಕೌಂಟಿ ಕ್ಲಬ್‌ ಅಧ್ಯಕ್ಷ ಅಬ್ದುಲ್‌ ಮಜೀದ್‌, ಕೊಡಗು ಜಿಲ್ಲೆಯ ತಂಡಗಳು ಸೇರಿದಂತೆ ತಮಿಳುನಾಡು, ಕೇರಳ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಟ್ಟಗೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯನ್ನು ಗೆದ್ದ ತಂಡಕ್ಕೆ ಚಳಿಯಂಡ ಲೋಕೇಶ್‌ (ಗೊಂಬೆ) ಅವರ ಸ್ಮರಣಾರ್ಥ ಚಳಿಯಂಡ ಘಣಾವತಿಯವರು ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಿದ್ದಾರೆ. ದ್ವಿತೀಯ, ತೃತೀಯ ಹಾಗೂ ಚತುರ್ಥ ತಂಡಗಳಿಗೂ ಬಹುಮಾನ ನೀಡಲಾಗುವುದು ಎಂದು ತಿಳಿದರು.ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ ಪ್ರಯಾಣ ಭತ್ಯೆ, ಊಟದ ವೆಚ್ಚಕ್ಕಾಗಿ ರೂ 8,000 ನೀಡಲಾಗುವುದು. ಆಸಕ್ತರು ಮಾರ್ಚ್‌ 20ರ ಒಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 94496 27483 ಸಂಪರ್ಕಿಸಬಹುದು ಎಂದು ಹೇಳಿದರು.

ಕ್ಲ

ಬ್‌ ಕಾರ್ಯದರ್ಶಿ ಪಿ.ಎ. ಹ್ಯಾರೀಸ್‌, ಸಹಕಾರ್ಯದರ್ಶಿ ಯತೀಶ್‌ ಸೋಮಯ್ಯ, ಖಜಾಂಚಿ ಎಂ.ಎ. ನೂರುದ್ದೀನ್‌, ಅಬ್ದುಲ್‌ ಅಸೀಬ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.