ಏ.1ರಿಂದ ಭವಿಷ್ಯ ನಿಧಿ ಕಾರ್ಡ್?

7

ಏ.1ರಿಂದ ಭವಿಷ್ಯ ನಿಧಿ ಕಾರ್ಡ್?

Published:
Updated:

ನವದೆಹಲಿ (ಪಿಟಿಐ): ನೌಕರರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಏಪ್ರಿಲ್ 1ರಿಂದ  ತನ್ನ ಎಲ್ಲ ಚಂದಾದಾರರಿಗೆ `ಭವಿಷ್ಯನಿಧಿ  ಕಾರ್ಡ್~ ವಿತರಿಸುವ ಸಾಧ್ಯತೆ ಇದೆ. ಸುಮಾರು 5 ಕೋಟಿ `ಇಪಿಎಫ್‌ಒ~ ಚಂದಾದಾರರಿಗೆ ಬ್ಯಾಂಕ್ ಪಾಸ್‌ಬುಕ್ ಮಾದರಿಯ ಈ ಕಾರ್ಡ್ ವಿತರಿಸಲು  ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ)  ಶೀಘ್ರದಲ್ಲೇ ಅನುಮೋದನೆ ನೀಡಲಿದೆ. ಭವಿಷ್ಯನಿಧಿ ಚಂದಾದಾರರು ಈ ಕಾರ್ಡ್ ಹೊಂದುವುದನ್ನು `ಇಪಿಎಫ್‌ಒ~ ಕಡ್ಡಾಯಗೊಳಿಸಿದ್ದು, ಇದರಲ್ಲಿ ಉದ್ಯೋಗಿಯ ವೈಯಕ್ತಿಕ ಮತ್ತು ಕೌಟುಂಬಿಕ ವಿವರ, ಜನ್ಮ ದಿನಾಂಕ,  ಪಿಂಚಣಿಗೆ ಸಂಬಂಧಿಸಿದ ಮಾಹಿತಿ ಅಡಕವಾಗಿರುತ್ತವೆ.  ಪ್ರತಿ ತಿಂಗಳೂ ಮಾಹಿತಿ ಪರಿಷ್ಕೃತಗೊಳ್ಳುತ್ತಿರುತ್ತದೆ.ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ  ನೇತೃತ್ವದಲ್ಲಿನ `ಇಪಿಎಫ್‌ಒ~ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಫೆಬ್ರುವರಿ 22ರಂದು ಸಭೆ ಸೇರಲಿದ್ದು, ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ. ಕಳೆದ ವರ್ಷ, ಡಿಸೆಂಬರ್ 23ರಂದು `ಸಿಬಿಟಿ~ ಸಭೆ ಸೇರಿದ್ದರೂ, ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿರಲಿಲ್ಲ. ಆದರೆ, ಈ ಬಾರಿ ಖಂಡಿತವಾಗಿ ಒಪ್ಪಿಗೆ ಲಭಿಸಲಿದೆ ಎಂದೂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry