ಶನಿವಾರ, ಜೂನ್ 12, 2021
23 °C

ಏ.2 ರಿಂದ ಎಸ್‌ಎಐ ಬೇಸಿಗೆ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರವು (ಎಸ್‌ಎಐ) ಏಪ್ರಿಲ್‌ 2 ರಿಂದ ಮೇ 30ರವರೆಗೆ ಒಟ್ಟು 13 ವಿಭಾಗ ಗಳಲ್ಲಿ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.ಶಿಬಿರದಲ್ಲಿ ಅಥ್ಲೆಟಿಕ್ಸ್‌, ಬ್ಯಾಡ್ಮಿಂ ಟನ್‌, ಬ್ಯಾಸ್ಕೆಟ್‌ಬಾಲ್‌, ಕ್ರಿಕೆಟ್‌, ಫುಟ್‌ಬಾಲ್‌, ಹ್ಯಾಂಡ್‌ಬಾಲ್‌, ಹಾಕಿ, ಕಬಡ್ಡಿ, ಕೊಕ್ಕೊ, ಸಾಫ್ಟ್‌ಬಾಲ್‌, ಟೇಬಲ್‌ ಟೆನಿಸ್‌, ವಾಲಿಬಾಲ್‌ ಮತ್ತು ಚಿಣ್ಣರ ಅಥ್ಲೆಟಿಕ್ಸ್‌ ನಲ್ಲಿ ತರಬೇತಿ ನೀಡಲಾಗುತ್ತದೆ.ಇವುಗಳ ಹೊರತಾಗಿ ಮೇ 2ರಿಂದ 30ರವರೆಗೆ ಈಜು, ಟೇಕ್ವಾಂಡೋ  ಮತ್ತು ಟೆನಿಸ್‌ನಲ್ಲಿ ತರಬೇತಿ ನೀಡು ತ್ತಿದ್ದು, ಈಜು ತರಬೇತಿಯು ಜೂನ್‌ 30ರವರೆಗೆ ಮುಂದುವರಿಯಲಿದೆ.ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಮಾ.26, 27 ಮತ್ತು 28 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ಒಳಗಾಗಿ ಹೆಸರು ನೊಂದಾಯಿಸಬಹುದಾಗಿದೆ.ಈಜು, ಟೇಕ್ವಾಂಡೋ ಮತ್ತು ಟೆನಿಸ್‌ ತರಬೇತಿ ಶಿಬಿರದ ನೊಂದಣಿ ದಿನಾಂಕವನ್ನು ನಂತರ ಪ್ರಕಟಿಸುವು ದಾಗಿ ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊ.8762546800 ಮತ್ತು 23215647, 23213120, 23210247 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.