ಸೋಮವಾರ, ಜೂನ್ 21, 2021
29 °C

ಐಆರ್‌ಐ ಪ್ರತಿಭಾ ಶೋಧಕ್ಕೆ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತದ ಮತ್ತೊಂದು ರಿಯಾಲಿಟಿ ಶೋಗೆ ದೇಶದ 17 ನಗರಗಳಂತೆ ಬೆಂಗಳೂರೂ ಸಜ್ಜಾಗಿದೆ. ದೊಡ್ಡ ಸಂಗೀತ ಕಾರ್ಯಕ್ರಮವೆನ್ನಲಾಗುವ ‘ಐಡಿಯಾ ರಾಕ್ಸ್ ಇಂಡಿಯಾ ಸೀಸನ್‌ 6’ಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಗಿದ್ದು, ‘ಐಆರ್‌ಐ ಪ್ರತಿಭಾ ಶೋಧ’ ಈ ಮೂಲಕ ನಡೆಯಲಿದೆ.ಈ ಹಿಂದಿನ ಸೀಸನ್‌ಗಳಲ್ಲಿ ಪಾಲ್ಗೊಂಡಿದ್ದ ಮಿಕಾ ಮತ್ತು ಸುನಿಧಿ ಚವ್ಹಾಣ್‌ ಈ ಬಾರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಐಆರ್‌ಐ 2014ಕ್ಕೆ ಪ್ರವೇಶಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ಈಗಾಗಲೇ  ಶುರುವಾಗಿದ್ದು 18 ವರ್ಷ ಮೀರಿದ ಸ್ಪರ್ಧಾಕಾಂಕ್ಷಿಗಳು ಐಡಿಯಾ ರಾಕ್ಸ್ ಇಂಡಿಯಾ ಪಾಸ್‌ಗಳನ್ನು ಯಾವುದೇ ಮೈ ಐಡಿಯಾ ಮಳಿಗೆಗಳಿಂದ ಪಡೆದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.ಆಸಕ್ತರು www.idearocksindia.comನಲ್ಲಿ ಹೆಸರು ನೋಂದಾಯಿಸಬಹುದು. ರೇಡಿಯೋ ಆಡಿಷನ್‌ ಅಥವಾ ಐಡಿಯಾ ಮೊಬೈಲ್‌ ಫೋನ್‌ ಗ್ರಾಹಕರು ಐವಿಆರ್ ೫೫೪೫೬೧೦ ಮೂಲಕ ಮೊಬೈಲ್ ಆಡಿಷನ್‌ಗಳು, ರೇಡಿಯೋ ಮತ್ತು ಆನ್ ಗ್ರೌಂಡ್ ಆಡಿಷನ್‌ಗಳಲ್ಲಿ ಪಾಲ್ಗೊಳ್ಳಬಹುದು. ವೈಯಕ್ತಿಕ, ಜಂಟಿ ಹಾಗೂ ಸಂಗೀತೋಪಕರಣ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.ಸೂಪರ್‌ಸ್ಟಾರ್ ಮಿಕಾ ಐಆರ್‌ಐ ಬೆಂಗಳೂರಿನ ಅಂತಿಮ ಸ್ಪರ್ಧಿಯನ್ನು ಆಯ್ಕೆ ಮಾಡುತ್ತಾರೆ. ಮಾರ್ಚ್ ೩೦ರಂದು ಯಲಹಂಕದ ಸೂಪರ್‌ನೋವಾ ಅರೇನಾ ಅಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಐಆರ್‌ಐ ಮಹಾ ಸ್ಪರ್ಧೆಯಲ್ಲಿ ಮಿಕಾ ಅವರು ವಿಜೇತರನ್ನು ಗೌರವಿಸಲಿದ್ದಾರೆ. ಅವರೊಂದಿಗೆ ಹಾಡುವ ಅವಕಾಶವೂ ವಿಜೇತರದ್ದಾಗಲಿದೆ.

ವಿವರಗಳಿಗೆ www.idearocksindia.com ಗೆ ಲಾಗಾನ್ ಆಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.