ಐಎಂಎಫ್ ಮುನ್ನೋಟ: ಸೂಚ್ಯಂಕ 450 ಅಂಶ ಕುಸಿತ

ಮುಂಬೈ (ಪಿಟಿಐ): ಚೀನಾದ ಜಿಡಿಪಿ ಕುಸಿತವು, ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 450 ಅಂಶಗಳಷ್ಟು ಭಾರಿ ಕುಸಿತ ಕಂಡಿದೆ.
ಚೀನಾ ಮಾತ್ರವಲ್ಲ, ಒಟ್ಟಾರೆ ವಿಶ್ವದ ಆರ್ಥಿಕ ಪ್ರಗತಿ ವೇಗವು ತೀವ್ರವಾಗಿ ಕುಸಿಯಲಿದೆ ಎಂದು ಅಂತರರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್) ಮುನ್ನೋಟ ನೀಡಿರುವುದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ಇದರಿಂದ ಮಂಗಳವಾರ ಬೆಳಿಗ್ಗೆಯೇ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಂಡುಬಂತು. ಬ್ಯಾಂಕಿಂಗ್ , ಲೋಹ ಕಂಪೆನಿ, ಭಾರಿ ಯಂತ್ರೋಪಕರಣ ವಲಯದ ಷೇರುಗಳು ತೀವ್ರ ಹಾನಿ ಅನುಭವಿಸಿದವು.
ಜಾಗತಿಕ ಜಿಡಿಪಿಯು 2016ರಲ್ಲಿ ಕೇವಲ ಶೇ 3.4ರಷ್ಟು ಪ್ರಗತಿ ಕಾಣಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಮೊದಲು ಅಂದರೆ, ಅಕ್ಟೋಬರ್ನಲ್ಲಿ ಶೇ 3.6ರಷ್ಟು ಜಿಡಿಪಿ ಪ್ರಗತಿ ಕಾಣುವುದಾಗಿ ಐಎಂಎಫ್ ಮುನ್ನೋಟ ನೀಡಿತ್ತು.
ಸದ್ಯ ಸೂಚ್ಯಂಕ 24,031 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.