ಐಎಂಎಫ್ ಮತ ಹೆಚ್ಚುಪಾಲು ರೂ 59 ಸಾವಿರ ಕೋಟಿ ಪಾವತಿ?

7

ಐಎಂಎಫ್ ಮತ ಹೆಚ್ಚುಪಾಲು ರೂ 59 ಸಾವಿರ ಕೋಟಿ ಪಾವತಿ?

Published:
Updated:
ಐಎಂಎಫ್ ಮತ ಹೆಚ್ಚುಪಾಲು ರೂ 59 ಸಾವಿರ ಕೋಟಿ ಪಾವತಿ?

ನವದೆಹಲಿ(ಪಿಟಿಐ): ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಲ್ಲಿನ ಮತದಾನದ ಪಾಲು ಹೆಚ್ಚಿಸಿಕೊಳ್ಳುವ ಸಲುವಾಗಿ ಮನವಿ ಸಲ್ಲಿಸಿರುವ ಭಾರತ ಸರ್ಕಾರ, ಈ ಪ್ರಸ್ತಾವನೆ ಒಪ್ಪಿತವಾದಲ್ಲಿ ಹೆಚ್ಚುವರಿಯಾಗಿ 1100 ಕೋಟಿ ಅಮೆರಿಕನ್ ಡಾಲರ್(ರೂ 59480 ಕೋಟಿ) ಪಾವತಿಸಬೇಕಿದೆ.ಸದ್ಯ ಐಎಂಎಫ್‌ನಲ್ಲಿ ಭಾರತದ ಮತದಾನದ ಪಾಲು ಶೇ 2.44ರಷ್ಟಿದೆ. ಇದನ್ನು ಶೇ 2.75ಕ್ಕೆ ಹೆಚ್ಚಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋನಾರಾಯಣ ಮೀನ ಅವರು ಲೋಕಸಭೆಗೆ ಶುಕ್ರವಾರ ಲಿಖಿತ ಉತ್ತರ ನೀಡಿದ್ದಾರೆ.ಇದಕ್ಕಾಗಿ ಐಎಂಎಫ್‌ಗೆ ಪಾವತಿಸಬೇಕಿರುವ ಹೆಚ್ಚುವರಿ ಹಣದಲ್ಲಿ ಶೇ 25ರಷ್ಟು ಅಂದರೆ ರೂ 14960 ಕೋಟಿಯಷ್ಟನ್ನು ಡಾಲರ್ (275 ಕೋಟಿ) ಲೆಕ್ಕದಲ್ಲಿಯೇ ಪಾವತಿಸಬೇಕಿದೆ ಎಂದು ವಿವರಿಸಿದ್ದಾರೆ.ಸದಸ್ಯ ರಾಷ್ಟ್ರಗಳ ಮತದಾನದ ಪಾಲನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry