ಐಎಇಎ -ಇರಾನ್ ಒಪ್ಪಂದ ವಿಫಲ ವಿಷಾದಕರ ಬೆಳವಣಿಗೆ: ಅಮೆರಿಕ

7

ಐಎಇಎ -ಇರಾನ್ ಒಪ್ಪಂದ ವಿಫಲ ವಿಷಾದಕರ ಬೆಳವಣಿಗೆ: ಅಮೆರಿಕ

Published:
Updated:
ಐಎಇಎ -ಇರಾನ್ ಒಪ್ಪಂದ ವಿಫಲ ವಿಷಾದಕರ ಬೆಳವಣಿಗೆ: ಅಮೆರಿಕ

 

ವಾಷಿಂಗ್ಟನ್ (ಪಿಟಿಐ): ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ)ಯೊಂದಿಗೆ ಯಾವುದೇ ಒಪ್ಪಂದಕ್ಕೆ ಬರಲು ಇರಾನ್ ವಿಫಲವಾಗಿರುವುದು `ವಿಷಾದಕರ~ ಎಂದಿರುವ ಅಮೆರಿಕ, `ಈ ಬೆಳವಣಿಗೆ ನಿರಾಶದಾಯಕವಾದರೂ, ಅಚ್ಚರಿಯ ವಿಷಯವಲ್ಲ~ ಎಂದು ಪ್ರತಿಕ್ರಿಯಿಸಿದೆ.`ಐಎಇಎ ತನ್ನ ನವೆಂಬರ್ ವರದಿಯಲ್ಲಿ ಪ್ರಸ್ತಾಪಿಸಿರುವ ಗಂಭೀರ ಆರೋಪಗಳ ಕುರಿತು ಪೂರ್ಣ ತನಿಖೆ ನಡೆಸಲು ತಪಾಸಣಾ ಪರಿಣತರನ್ನು ಕಳುಹಿಸುವ ಒಪ್ಪಂದಕ್ಕೆ ಇರಾನ್ ಒಪ್ಪದಿರುವುದು ದುರದೃಷ್ಟಕರ~ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.`ಇರಾನ್ ರಹಸ್ಯವಾಗಿಟ್ಟಿರುವ ತನ್ನ ಅಣ್ವಸ್ತ್ರ ತಾಣವನ್ನು ತಪಾಸಣೆ ನಡೆಸಲು ಐಎಇಎ ಕಾವಲು ಸಮಿತಿಗೆ ಅನುಮತಿ ನೀಡದೆ ಜಾರಿಕೊಳ್ಳುವ ಮೂಲಕ ಅದರ ಮೇಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಅಂತರರಾಷ್ಟ್ರೀಯ ನಿಬಂಧನೆಗಳಿಗೆ ಒಳಪಡಲು ಇರಾನ್ ನಿರಾಕರಿಸುತ್ತಿರುವುದನ್ನು ಸ್ಪಷ್ಟಪಡಿಸಲಿದ್ದು, ಆ ದೇಶದ ಮೊಂಡು ನಡವಳಿಕೆಯನ್ನೂ ಪ್ರದರ್ಶಿಸಿದೆ~ ಎಂದು ಅವರು ಟೀಕಿಸಿದರು.ಇದೇ ರೀತಿ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್, ಇರಾನ್ ನಿಲುವು ಅಚ್ಚರಿಯುಂಟು ಮಾಡಿಲ್ಲ ಮತ್ತು ಐಎಇಎ ಮುಂದಿನ ತನ್ನ ವಿಸ್ತೃತ ವರದಿಯಲ್ಲಿ ಅಂತಿಮವಾಗಿ ಯಾವ ನಿರ್ದಿಷ್ಟ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಶ್ವೇತಭವನ ಎದುರು ನೋಡುತ್ತಿದೆ~ ತಿಳಿಸಿದ್ದಾರೆ.`ಐಎಇಎ ತಪಾಸಣಾ ತಂಡಕ್ಕೆ ಇರಾನ್ ಸಹಕಾರ ನೀಡಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯದ ಆತಂಕವನ್ನು ದೂರ ಮಾಡಲು ಮುಂದಾಗಬೇಕು~ ಎಂದು ಅವರು    ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry