ಐಎಇಎ- ಇರಾನ್ ಮಾತುಕತೆ ವಿಫಲ

7

ಐಎಇಎ- ಇರಾನ್ ಮಾತುಕತೆ ವಿಫಲ

Published:
Updated:

ವಿಯೆನ್ನಾ(ಎಪಿ/ಐಎಎನ್‌ಎಸ್): ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ಪರಮಾಣು ಕಾವಲು ಸಮಿತಿ ಯಾದ `ಐಎಇಎ~ (ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ) ಹಾಗೂ ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಯೂ ಮುರಿದುಬಿದ್ದಿದ್ದು, ಆ ದೇಶ ತನ್ನ ಪರಮಾಣು ನೆಲೆಗಳನ್ನು `ಐಎಇಎ~ ಪರಿಶೀಲನೆಗೆ ಒಳಪಡಿಸಲು ನಿರಾಕರಿಸಿದೆ.ಮಾತುಕತೆ ವಿಫಲವಾಗಿದೆ ಎಂದು `ಐಎಇಎ~ ಬಹಿರಂಗಪಡಿಸುವ ಕೆಲ ಗಂಟೆಗಳ ಮುಂಚೆ ಇರಾನ್‌ನ ಸೇನಾಧಿಕಾರಿಯೊಬ್ಬರು ತನಗೆ ಬೆದರಿಕೆಯೊಡ್ಡುವ ಯಾವುದೇ ದೇಶದ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.ಮೂರು ವಾರಗಳ ಹಿಂದೆ `ಐಎಇಎ~ ಇರಾನ್ ಜತೆ ನಡೆಸಿದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿತ್ತು. ಇರಾನ್‌ನ ಅಣ್ವಸ್ತ್ರ ಚಟುವಟಿಕೆಗಳಿಗೆ ತಡೆಯೊಡ್ಡಬೇಕೆಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಆ ದೇಶದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದರೂ ಇರಾನ್ ಪರಮಾಣು ಚಟುವಟಿಕೆ ನಿಲ್ಲಿಸಿರಲಿಲ್ಲ.ಈ ವಾರ `ಐಎಇಎ~ ತಜ್ಞರ ತಂಡ, ಅಣ್ವಸ್ತ್ರ ಚಟುವಟಿಕೆ ನಿಲ್ಲಿಸಲು ಇರಾನ್ ಮನವೊಲಿಸುವ ಉದ್ದೇಶದಿಂದ ಮತ್ತೆ ಟೆಹರಾನ್‌ಗೆ ಭೇಟಿ ನೀಡಿತ್ತು.ಮಂಗಳವಾರ ಮಧ್ಯರಾತ್ರಿ ಈ ತಂಡ ಟೆಹರಾನ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ `ಐಎಇಎ~ ಎರಡನೇ ಸುತ್ತಿನ ಮಾತುಕತೆ ವಿಫಲವಾದ ಕುರಿತು ಪ್ರಕಟಣೆ ಹೊರಡಿಸಿದೆ. ಇರಾನ್ ಜತೆಗಿನ ಎರಡೂ ಮಾತುಕತೆಗಳಲ್ಲೂ `ಐಎಇಎ~ ತಂಡ, ಪರ್ಚಿನ್ ಸೇನಾ ನೆಲೆಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು. ಆದರೆ, ಎರಡೂ ಸಂದರ್ಭಗಳಲ್ಲೂ ಇರಾನ್ ಅನುಮತಿ ನಿರಾಕರಿಸಿದೆ.

ಇದು ನಿರಾಶಾದಾಯಕ ಎಂದು `ಐಎಇಎ~ ಹೇಳಿದೆ. ಇರಾನ್ ಆ ಸೇನಾ ನೆಲೆಯಲ್ಲಿಯೇ ಅಣ್ವಸ್ತ್ರ ತಯಾರಿಸುತ್ತಿದೆ ಎಂಬ ಗುಮಾನಿ ಇದೆ.ನಾವು ರಚನಾತ್ಮಕವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂದು `ಐಎಇಎ~ ನಿರ್ದೇಶಕ ಯುಕಿಯಾ ಅಮಾನೊ ತಿಳಿಸಿದ್ದಾರೆ. ಮಾತುಕತೆ ವಿಫಲವಾಗಲು ಇರಾನ್ ಕಾರಣ ಎಂಬ ಧಾಟಿಯಲ್ಲಿ ಈ ಪ್ರಕಟಣೆ ಇದೆ.ಆದರೆ, ಇರಾನ್ ವಿದೇಶಾಂಗ ಇಲಾಖೆ ವಕ್ತಾರ ರಮಿನ್ ಮೆಹಮಾನ್‌ಪರಸ್ತ್, `ಐಎಇಎ~ ಜತೆ ಸಹಕಾರ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.ತೈಲ ಖರೀದಿ: ಭಾರತದ ಮೇಲೆ ಒತ್ತಡವಾಷಿಂಗ್ಟನ್(ಐಎಎನ್‌ಎಸ್): ಕಚ್ಚಾ ತೈಲಕ್ಕಾಗಿ ಇರಾನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಲೇ ಇದೆ.ಈ ಕುರಿತು ನಾವು ಎಲ್ಲ ದೇಶಗಳ ಜತೆ ಮಾತನಾಡುತ್ತಲೇ ಇದ್ದೇವೆ. ಭಾರತ, ಚೀನಾ, ಯುರೋಪ್ ದೇಶಗಳು, ಏಷ್ಯಾ, ಆಫ್ರಿಕಾದ ದೇಶಗಳ ಜತೆ ಚರ್ಚೆ ಮುಂದುವರಿದಿದೆ.

 

ಇರಾನ್ ಮೇಲೆ ಒತ್ತಡ ಹೆಚ್ಚಿಸುವುದು ಈ ಎಲ್ಲ ಮಾತುಕತೆಗಳ ಉದ್ದೇಶ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರಾದ ವಿಕ್ಟೋರಿಯಾ ನಲಂಡ್ ಹೇಳಿದ್ದಾರೆ.

 

`ಇರಾನ್‌ನ ತೈಲ ಆಮದು ನಿಲ್ಲಿಸಲು ನಿರಾಕರಿಸಿರುವ ಭಾರತ ಅಮೆರಿಕದ ಮುಖಕ್ಕೆ ಬಾರಿಸಿದೆ~ ಎಂದು ನಿವೃತ್ತ ರಾಜತಾಂತ್ರಿಕ ನಿಕ್ ಬರ್ನ್ಸ್ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, `ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ~ ಎಂದ ನಲಂಡ್, ಭಾರತದ ಜತೆ ಸಂವಹನವನ್ನು ನಾವು ಮುಂದುವರಿಸುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry