ಐಎಎಫ್‌ಗೆ ಭರ್ಜರಿ ಜಯ

7

ಐಎಎಫ್‌ಗೆ ಭರ್ಜರಿ ಜಯ

Published:
Updated:
ಐಎಎಫ್‌ಗೆ ಭರ್ಜರಿ ಜಯ

ಬೆಂಗಳೂರು: ಇಂಡಿಯನ್ ಏರ್ ಫೋರ್ಸ್ (ಐಎಎಫ್) ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐಎಎಫ್ 6-1 ಗೋಲುಗಳಿಂದ ಫೋರ್ಟಿಸ್ ತಂಡವನ್ನು ಮಣಿಸಿತು.ಪಂದ್ಯದ ಮೇಲೆ ಪೂರ್ಣ ಹತೋಟಿ ಸಾಧಿಸಿದ ಐಎಎಫ್ ಆರಂಭದಿಂದಲೇ ಗೋಲು ಗಳಿಸುತ್ತಾ ಸಾಗಿತು. ಹಾಗಾಗಿ ವಿರಾಮದ ವೇಳೆಗೆ 4-0 ಮುನ್ನಡೆ ಪಡೆದುಕೊಂಡಿತ್ತು. ಸನ್ವರ್ ಅಲಿ (3ನೇ ಹಾಗೂ 16ನೇ ನಿಮಿಷ), ಜಸ್‌ಪ್ರೀತ್ (24ನೇ ಹಾಗೂ 34ನೇ ನಿ.), ಟೊಪ್ನೊ (41ನೇ ನಿ.) ಹಾಗೂ ಲವ್‌ಪ್ರೀತ್ ಸಿಂಗ್ (62ನೇ ನಿ.) ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು. ಫೋರ್ಟಿಸ್ ತಂಡದ ಏಕೈಕ ಗೋಲನ್ನು ವಿಕ್ರಮ್‌ಜೀತ್ ಸಿಂಗ್ (64ನೇ ನಿ.) ಗಳಿಸಿದರು.ಐಎಎಫ್ 9 ಪಂದ್ಯಗಳಿಂದ ಆರು ಪಾಯಿಂಟ್ ಹೊಂದಿದೆ. ಫೋರ್ಟಿಸ್ 10 ಪಂದ್ಯಗಳಿಂದ ಏಳು ಪಾಯಿಂಟ್ ಕಲೆಹಾಕಿದೆ.

 

ಡ್ರಾ ಪಂದ್ಯದಲ್ಲಿ ಎಸ್‌ಎಐ: ಎಸ್‌ಎಐ ಹಾಗೂ ಆರ್ಮಿ ರೆಡ್ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾನಲ್ಲಿ ಕೊನೆಗೊಂಡಿತು. ಎಸ್‌ಎಐ ತಂಡದ ದರ್ಶನ್ (6ನೇ ನಿ.) ಹಾಗೂ ನಿಕಿನ್ ತಿಮ್ಮಯ್ಯ (61ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಆರ್ಮಿ ರೆಡ್‌ನ ಧನಂಜಯ್ ಮಹಾದಿಕ್ (15ನೇ ಹಾಗೂ 40ನೇ ನಿ.) ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry