ಐಎಎಸ್ ಅಧಿಕಾರಿಗಳ ವರ್ಗ

7

ಐಎಎಸ್ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ ಸೇರಿದಂತೆ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಯೋಗೇಂದ್ರ ತ್ರಿಪಾಠಿ- ಆಯುಕ್ತರು, ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ. ಎಂ.ಆರ್.ಕಾಂಬ್ಳೆ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ನಿಗಮ. ಡಾ.ಬಾಬುರಾವ್ ಮುಡಬಿ- ಕಾರ್ಯದರ್ಶಿ, ಕೃಷಿ ಇಲಾಖೆ. ಎಸ್. ಶಂಕರನಾರಾಯಣ- ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕೆ.ಪಿ.ಮೋಹನ್‌ರಾಜ್- ಜಿಲ್ಲಾಧಿಕಾರಿ, ಹಾಸನ. ಎಂ.ವಿ.ಸಾವಿತ್ರಿ- ಜಿಲ್ಲಾಧಿಕಾರಿ, ರಾಯಚೂರು.ಎಂ.ವಿ.ವೇದಮೂರ್ತಿ- ಜಿಲ್ಲಾಧಿಕಾರಿ, ಶಿವಮೊಗ್ಗ. ಪಾಂಡುರಂಗ ಬೊಮ್ಮಯ್ಯ ನಾಯಕ್- ಜಿಲ್ಲಾಧಿಕಾರಿ, ಗದಗ.

ಡಾ.ಕೆ.ಜಿ.ಜಗದೀಶ್- ಮಿಷನ್ ಡೈರೆಕ್ಟರ್, ಕರ್ನಾಟಕ ಸ್ಟೇಟ್ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ, ಬೆಂಗಳೂರು. ಅಲ್ಲದೆ ಇವರನ್ನು ಹೆಚ್ಚುವರಿಯಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿಯೂ ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry