ಐಎನ್‌ಎಸ್ ಅಧ್ಯಕ್ಷರಾಗಿ ಆಶಿಶ್ ಬಗ್ಗಾ ಆಯ್ಕೆ

7

ಐಎನ್‌ಎಸ್ ಅಧ್ಯಕ್ಷರಾಗಿ ಆಶಿಶ್ ಬಗ್ಗಾ ಆಯ್ಕೆ

Published:
Updated:
ಐಎನ್‌ಎಸ್ ಅಧ್ಯಕ್ಷರಾಗಿ ಆಶಿಶ್ ಬಗ್ಗಾ ಆಯ್ಕೆ

ಬೆಂಗಳೂರು: `ಇಂಡಿಯಾ ಟುಡೆ~ ಸಮೂಹದ ಆಶಿಶ್ ಬಗ್ಗಾ ಅವರು ಭಾರ ತೀಯ ವೃತ್ತಪತ್ರಿಕಾ ಸಂಘದ (ಐಎನ್‌ಎಸ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಐಎನ್‌ಎಸ್‌ನ 72ನೇ ವಾರ್ಷಿಕ ಮಹಾಸಭೆಯಲ್ಲಿ ಬಗ್ಗಾ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ವ್ಯಾಪಾರ್- ಜನ್ಮಭೂಮಿ ಸಮೂಹದ ಕುಂದನ್ ಆರ್. ವ್ಯಾಸ್ ಅವರಿಂದ ತೆರವಾಗುವ ಸ್ಥಾನವನ್ನು ಬಗ್ಗಾ ಅವರು ವಹಿಸಿಕೊಳ್ಳಲಿದ್ದಾರೆ.`ಡೆಕ್ಕನ್ ಹೆರಾಲ್ಡ್~ ಪತ್ರಿಕೆಯ ಸಂಪಾದಕ ಕೆ.ಎನ್. ತಿಲಕ್ ಕುಮಾರ್ ಅವರು ಸಂಘದ ಡೆಪ್ಯುಟಿ ಪ್ರೆಸಿಡೆಂಟ್ ಆಗಿ ಮತ್ತು ದಿ ಸ್ಟೇಟ್ಸ್‌ಮನ್ ಪತ್ರಿಕೆಯ ರವೀಂದ್ರಕುಮಾರ್ ಅವರು ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾದರು.ಆಜ್ ಸಮಾಜ್ ಪತ್ರಿಕೆಯ ರಾಕೇಶ್ ಶರ್ಮಾ ಅವರು 2011-12ನೇ ಸಾಲಿನಲ್ಲಿ ಸಂಘದ ಗೌರವ ಖಜಾಂಚಿ ಯಾಗಿ ಕರ್ತವ್ಯ ನಿರ್ವಹಿ ಸುತ್ತಾರೆ ಎಂದು ಐಎನ್‌ಎಸ್ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry