ಐಎನ್‌ಜಿ ಲೈಫ್ ಹಸಿರು ಅಭಿಯಾನ

ಸೋಮವಾರ, ಜೂಲೈ 22, 2019
27 °C

ಐಎನ್‌ಜಿ ಲೈಫ್ ಹಸಿರು ಅಭಿಯಾನ

Published:
Updated:

ಐಎನ್‌ಜಿ ಲೈಫ್ ಇನ್ಷೂರೆನ್ಸ್ ಪರಿಸರ ಸ್ನೇಹಿ ನಗರಗಳ ನಿರ್ಮಾಣಕ್ಕಾಗಿ `ಹಸಿರು ನಗರಕ್ಕೆ ಮತ ನೀಡಿ~ ಎಂಬ ಅಭಿಯಾನ ನಡೆಸಿತು.ಇದರಲ್ಲಿ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಸುಮಾರು 600 ನಾಗರಿಕರು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಹಸಿರು ಉಳಿಸಲು ಬೆಂಬಲಿಸಿ ಎಂದು ಮನವಿ ಮಾಡಿದರು, ಸಸಿಗಳನ್ನು ವಿತರಿಸಿದರು, ಅಲ್ಲದೆ ನೇಕ ಕಡೆ ಸಸಿ ನೆಟ್ಟರು.ಅಭಿಯಾನವನ್ನು ಉದ್ಘಾಟಿಸಿದ ಐಎನ್‌ಜಿ ಲೈಫ್ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಯೂಕೋ ವೆಗ್ಟರ್ ಅವರು, `ಪರಿಸರಕ್ಕೆ ಕೊಡುಗೆ ನೀಡುವಲ್ಲಿ ಕಾರ್ಪೊರೇಟ್ ಭಾರತ ಮುಖ್ಯ ಪಾತ್ರ ವಹಿಸಲಿದೆ ಎಂಬ ಬಗ್ಗೆ ನಮಗೆ ನಂಬಿಕೆ ಇದೆ.ನಾಗರಿಕರಲ್ಲಿ ಪರಿಸರ ಕುರಿತ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಕಾರಣದಿಂದಲೇ ದೇಶಾದ್ಯಂತ 210 ನಗರಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ~ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry