ಶುಕ್ರವಾರ, ನವೆಂಬರ್ 15, 2019
22 °C

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಸಂಜೀವ್‌ಗೆ 10ನೇ ಸ್ಥಾನ

Published:
Updated:

ನವದೆಹಲಿ (ಪಿಟಿಐ): ಭಾರತದ ಸಂಜೀವ್ ರಜಪೂತ್, ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ 50 ಮೀಟರ್ಸ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಲು ವಿಫಲರಾದರು.ಕೊರಿಯಾದ ಚಾಂಗ್ವನ್‌ನಲ್ಲಿ ಮಂಗಳವಾರ ನಡೆದ ಮೂರು ವಿಧದ ಈ ಸ್ಪರ್ಧೆಯಲ್ಲಿ  ಅವರು 1144 ಅಂಕಗಳೊಂದಿಗೆ 10ನೇ ಸ್ಥಾನ ಪಡೆದರು. ಫೈನಲ್‌ನಲ್ಲಿ ಕೇವಲ ಎಂಟು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುವ ಕಾರಣ ಸಂಜೀವ್ ರಾಥೋಡ್ ಟೂರ್ನಿಯಿಂದ ಹೊರಬಿದ್ದರು.ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ಸುರೇಂದ್ರ ಸಿಂಗ್ ರಾಥೋಡ್ 17ನೇ ಮತ್ತು ಚೈನ್ ಸಿಂಗ್ 20ನೇ ಸ್ಥಾನ ಗಳಿಸಿದರು. ಈ ವಿಶ್ವಕಪ್‌ನಲ್ಲಿ ಭಾರತ ಈವರೆಗೆ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದಿದೆ.

ಪ್ರತಿಕ್ರಿಯಿಸಿ (+)