ಸೋಮವಾರ, ಮಾರ್ಚ್ 8, 2021
24 °C

ಐಎಸ್‌ ಪ್ರಕರಣ: ಎನ್ಐಎಗೆ ಶೀಘ್ರವೇ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಎಸ್‌ ಪ್ರಕರಣ: ಎನ್ಐಎಗೆ ಶೀಘ್ರವೇ ಹಸ್ತಾಂತರ

ಕಾಸರಗೋಡು: ಕಾಸರಗೋಡಿನಿಂದ 17 ಮಂದಿ ಹಾಗೂ ಪಾಲ್ಘಾಟ್‌ನಿಂದ 4 ಮಂದಿ ಐಎಸ್‌ ಶಿಬಿರ ಸೇರಿದ್ದಾರೆ ಎಂಬ ಮಾಹಿತಿ ಬಹುತೇಕ ಖಚಿತವಾಗಿದ್ದು, ಕೇಂದ್ರ ತನಿಖಾ ದಳ (ಎನ್‌ಐಎ) ಶೀಘ್ರವೇ ತನಿಖೆ ಕೈಗೆತ್ತಿಕೊಳ್ಳಲಿದೆ.|ದೇಶ ಬಿಟ್ಟವರು ಈಗ ಆಫ್ಘಾನಿಸ್ತಾನದ ಫಿಲಾಪ್‌ ಎನ್ನುವ ಜಾಗದಿಂದ ತಮ್ಮ ಮನೆಯವರಿಗೆ ಟೆಲಿಗ್ರಾಫಿಕ್ ಸಂದೇಶ ಕಳುಹಿಸಿರುವುದು ಹಾಗೂ ಇವರೆಲ್ಲರೂ ಐಎಸ್ ಜತೆ ನಂಟು ಬೆಳೆಸಿಕೊಂಡಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ.

ಐಎಸ್‌ ಸೇರ್ಪಡೆಯ ಸೂತ್ರಧಾರ ತ್ರಿಕರಿಪುರ ಉಡುಂಬುಂತಲ ಅಬ್ದುಲ್ ರಾಶೀದ್ (38) ಊರಿನಲ್ಲಿದ್ದ ವೇಳೆ ‘ಜಿಹಾದ್’ಗೆ ಕರೆ ನೀಡಿ, ಗುಪ್ತವಾಗಿ ನಿರಂತರ ಉಪನ್ಯಾಸ ನೀಡಿರುವುದು ಬೆಳಕಿಗೆ ಬಂದಿದೆ. ಕುರಾನ್ ಮಾಹಿತಿ ಶಿಬಿರದ ಹೆಸರಿನಲ್ಲಿ, ಈತ ಐಎಸ್ ಕರೆಯಂತೆ ಜಿಹಾದ್ ಉಪನ್ಯಾಸ ನೀಡುತ್ತಿದ್ದ ಎನ್ನಲಾಗಿದೆ. ಐಎಸ್‌ ಸಂದೇಶ ಸಾರುವ ‘ಡಾಬಿಕ್’ ಮ್ಯಾಗಝಿನ್‌ಗಳನ್ನು ಈತ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ.ಇಸ್ಲಾಮಿಕ್ ಸ್ಟೇಟ್‌ನ ತತ್ವಾದರ್ಶಗಳನ್ನು ಪ್ರಚುರಪಡಿಸಿದ ಆರೋಪದ ಮೇರೆಗೆ ಅಬ್ದುಲ್ ರಾಶೀದ್‌ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ (ಯುಎಪಿಎ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಬ್ದುಲ್ ರಾಶೀದ್ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಆತನಿಗೆ ಸಹಾಯ ಮಾಡಿದ ಆತನ ಎರಡನೇ ಪತ್ನಿ ಬಿಹಾರದ ಸೀತಾಮರಿ ಜಿಲ್ಲೆಯ ಯಾಸ್ಮಿನ್ ಮೊಹಮ್ಮದ್ (29) ಎಂಬಾಕೆಯನ್ನು 2ನೇ ಆರೋಪಿಯಾಗಿ ಪೊಲೀಸರು ದಾಖಲಿಸಿದ್ದಾರೆ.

ಕುವೈತ್‌ನಲ್ಲಿ ವ್ಯಕ್ತಿ ಬಂಧನ

ಐಎಸ್ ಶಿಬಿರಕ್ಕೆ ತೆರಳುವ ಭಾರತೀಯರಿಗೆ ಹಣ ನೀಡುತ್ತಿರುವ ಆರೋಪದ ಮೇಲೆ ಕುವೈತ್‌ ಪ್ರಜೆ ಅಬ್ದುಲ್‌ ಹಾದಿ ಅಬ್ದುಲ್ ರಹಿಮಾನ್ ಅಲ್ ಇನೈಸಿ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಗೆ ಐಎಸ್ ಜತೆ ಸಂಬಂಧ ಇರುವುದು ಖಚಿತವಾಗಿದೆ. ಇದಕ್ಕೂ ಮುನ್ನ ಆತ ಮಹಾರಾಷ್ಟ್ರದ ಕಲ್ಯಾಣ್‌ನಿಂದ ನಾಲ್ವರನ್ನು ಐಎಸ್‌ಗೆ ಸೇರುವುದಕ್ಕಾಗಿ ಹಣ ನೀಡಿದ್ದ ಎನ್ನಲಾಗಿದೆ. ಈ ತಂಡದಿಂದ ಒಬ್ಬಾತ ಮರಳಿ ಬಂದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ವಿಚಾರಿಸಿದಾಗ ಅಬ್ದುಲ್‌ ಹಾದಿ ಹಣ ನೀಡಿರುವ ವಿಷಯ ಬಹಿರಂಗವಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.