ಶುಕ್ರವಾರ, ಮೇ 14, 2021
21 °C

ಐಐಟಿ: ಚೆನ್ನೈ ಹುಡುಗರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಟಿ ಜಂಟಿ ಪ್ರವೇಶ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಮೊದಲ ಹಾಗೂ ಎರಡನೇ ರ‌್ಯಾಂಕ್ ಮದ್ರಾಸ್ ವಲಯದ ಅಭ್ಯರ್ಥಿಗಳ ಪಾಲಾಗಿದೆ. ದೆಹಲಿ ಅಭ್ಯರ್ಥಿಗಳು ಮೂರನೇ ಹಾಗೂ ನಾಲ್ಕನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಮೊದಲ ಹತ್ತು ರ‌್ಯಾಂಕ್ ಪಡೆದವರಲ್ಲಿ ಇಬ್ಬರು ವಿದ್ಯಾರ್ಥಿನಿಯರೂ ಇರುವುದು ವಿಶೇಷ.`ಮೊದಲ ರ‌್ಯಾಂಕ್ ಪಡೆದಿರುವ ಪಲ್ಲೇರ ಸಾಯಿ ಸಂದೀಪ್ ರೆಡ್ಡಿ 360ಕ್ಕೆ  332 ಅಂಕಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿ 330 ಅಂಕ ಗಳಿಸಿದ್ದಾರೆ' ಎಂದು ಐಐಟಿ-ದೆಹಲಿ ಸಂಘಟನಾ ಅಧ್ಯಕ್ಷ  ಎಚ್.ಸಿ.ಗುಪ್ತ ತಿಳಿಸಿದ್ದಾರೆ.ಮೂರು ಹಾಗೂ ನಾಲ್ಕನೇ ರ‌್ಯಾಂಕ್ ಪಡೆದಿರುವ ದೆಹಲಿ ವಲಯದ ಅಭ್ಯರ್ಥಿಗಳು ಕ್ರಮವಾಗಿ 329 ಹಾಗೂ 323 ಅಂಕಗಳನ್ನು ಗಳಿಸಿದ್ದಾರೆ.

ಮುಂಬೈ ಅಭ್ಯರ್ಥಿ 5ನೇ ರ‌್ಯಾಂಕ್ ಪಡೆದಿದ್ದಾರೆ. `ನನಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಆಸಕ್ತಿ ಇದೆ. ತರಗತಿ ನಡೆಯುತ್ತಿದ್ದ ದಿನಗಳಲ್ಲಿ ನಿತ್ಯವೂ ಐದು ತಾಸು ಓದುತ್ತಿದ್ದೆ. ನಂತರ ಸುಮಾರು ಎರಡು ತಿಂಗಳು ಪ್ರತಿದಿನ ಒಂಬತ್ತು ತಾಸು ಅಭ್ಯಾಸ ಮಾಡುತ್ತಿದೆ' ಎನ್ನುತ್ತಾರೆ ನಾಲ್ಕನೇ ರ‌್ಯಾಂಕ್ ಪಡೆದಿರುವ ಕಾರ್ತಿಕೇಯ. ದೆಹಲಿ ವಲಯದ ಅದಿತಿ ಲಡ್ಡಾ (ಮಧ್ಯಪ್ರದೇಶ) 320 ಅಂಕಗಳನ್ನು ಪಡೆದು ಆರನೇ ರ‌್ಯಾಂಕ್ ಗಳಿಸಿದ್ದಾರೆ.">ಪಡೆದುಕೊಂಡಿದ್ದಾರೆ. ಮದ್ರಾಸ್ ವಲಯದ (ತಿರುಪತಿ ) ಸಿಬಾಲಾ ಲೀನಾ  ಮಾಧುರಿ ಅವರು ಎಂಟನೇ ರ‌್ಯಾಂಕ್ (314 ಅಂಕ) ಗಳಿಸಿದ್ದಾರೆ.`ಸೂಪರ್30' ವಿದ್ಯಾರ್ಥಿಗಳ ಸಾಧನೆ

ಪಟ್ನಾ (ಪಿಟಿಐ): ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆ ಫಲಿತಾಂಶ ಶುಕ್ರವಾರ ಘೋಷಣೆಯಾಗಿದ್ದು, `ಸೂಪರ್30' ಸಂಸ್ಥೆಯ 28 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.


>ಹೆಸರಾಂತ ಗಣಿತ ತಜ್ಞ ಆನಂದ ಕುಮಾರ್ ಅವರು 2002ರಲ್ಲಿ `ಸೂಪರ್30' ಸಂಸ್ಥೆ ಹುಟ್ಟು ಹಾಕಿದ್ದರು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ `ಸೂಪರ್30' ಸಂಸ್ಥೆ ಉಚಿತ ವಸತಿ ಮತ್ತು ಆಹಾರದ ಜೊತೆಗೆ ಐಐಟಿ ತರಬೇತಿ ನೀಡುತ್ತಿದೆ.`ಐಐಟಿ-ಜೆಇಇ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಎಲ್ಲ ವಿದ್ಯಾರ್ಥಿಗಳು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಕ್ಕೆ ಸೇರಿದವರು' ಎಂದು ಆನಂದ ಕುಮಾರ್ ತಿಳಿಸಿದ್ದಾರೆ.`ನಮ್ಮ ಕುಟುಂಬ ಸದಸ್ಯರು ಅನೇಕ ಸಲ ಆಹಾರವಿಲ್ಲದೇ ದಿನಗಳನ್ನು ದೂಡಿದೆ' ಎಂದು `ಸೂಪರ್30' ಸಹಾಯದಿಂದ ಐಐಟಿಯಲ್ಲಿ ತೇರ್ಗಡೆ ಹೊಂದಿರುವ ಉತ್ತರ ಪ್ರದೇಶದ ಭಾನು ಅವರ ತಂದೆ ಕೂಲಿಕಾರ್ಮಿಕ ರಾಮ್‌ಪ್ಯಾರೆ ಅವರು ಭಾವುಕರಾಗಿ ನುಡಿದರು.ಸಮಸ್ಟಿಪುರದ ಪ್ರಣವ್ ಕುಮಾರ್, ಹಾಜಿಪುರದ ಅಂಕಿತ್ ಮತ್ತು ಅಭಿಷೇಕ್ ಕುಮಾರ್, ಐಐಟಿ ಪರೀಕ್ಷೆಯಲ್ಲಿ ಪಾಸಾಗಿರುವ 28 ವಿದ್ಯಾರ್ಥಿಗಳಲ್ಲಿ ಸೇರಿದ್ದಾರೆ. ಪ್ರಣವ್ ತಂದೆ ಬೇರೆಯವರ ಹೊಲದಲ್ಲಿ ಕೆಲಸ ನಿರ್ವಹಿಸಿದರೆ, ರಸ್ತೆ ಅಪಘಾತದಲ್ಲಿ ಅಂಕಿತ್ ತಂದೆ ಮೃತಪಟ್ಟಿದ್ದಾರೆ. ಅಭಿಷೇಕ್ ತಂದೆ ಮೆಕ್ಯಾನಿಕ್ ಆಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.