ಐಐಟಿ ಪ್ರವೇಶಕ್ಕೆ ಪ್ರತ್ಯೇಕ ಅರ್ಹತಾ ಪಟ್ಟಿ

ಶುಕ್ರವಾರ, ಜೂಲೈ 19, 2019
23 °C

ಐಐಟಿ ಪ್ರವೇಶಕ್ಕೆ ಪ್ರತ್ಯೇಕ ಅರ್ಹತಾ ಪಟ್ಟಿ

Published:
Updated:

ನವದೆಹಲಿ: 2013ರಿಂದ ನಡೆಯಲಿರುವ ಐಐಟಿ ಪ್ರವೇಶ ಪರೀಕ್ಷೆಗೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಅಖಿಲ ಭಾರತ ಅರ್ಹತಾ ಪಟ್ಟಿ ಸಿದ್ಧಗೊಳ್ಳಲಿದೆ.ಪ್ರವೇಶ ಪರೀಕ್ಷೆ ಕುರಿತಂತೆ ಸರ್ಕಾರದ `ಒಂದು ದೇಶ, ಒಂದು ಪರೀಕ್ಷೆ~ ಎಂಬ ಪ್ರಸ್ತಾಪಕ್ಕೆ ಸಂಬಂಧಿಸಿ ಎದ್ದ ವಿವಾದವನ್ನು ಕೊನೆಗಾಣಿಸುವಲ್ಲಿ ಐಐಟಿ ಮಂಡಳಿ, ಆಯಾ ರಾಜ್ಯಗಳ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಶೇ 20ರಷ್ಟು ವಿದ್ಯಾರ್ಥಿಗಳು (ಪರ್ಸಂಟೈಲ್) ಮಾತ್ರ ಐಐಟಿ    ಅಡ್ವಾನ್ಸ್‌ಡ್ ಪ್ರವೇಶ ಪರೀಕ್ಷೆಗೆ ಅರ್ಹರು ಎಂದು ಇತ್ತೀಚೆಗೆ ನಿರ್ಧರಿಸಿತ್ತು.ಈ ಹೊಸ ವ್ಯವಸ್ಥೆಯಿಂದ ಮೀಸಲಾತಿಯ ಮೇಲೆ ಯಾವುದೇ ಪರಿಣಾಮ ಬೀರದು. ಅಖಿಲ ಭಾರತ ಅರ್ಹತಾ ಪಟ್ಟಿ ಪ್ರಕಟಿಸುವ ಮುನ್ನ ಅತಿ ಹೆಚ್ಚು ಅಂಕಗಳಿಸಿದ ಶೇಕಡಾ 20ರಷ್ಟು ಅಭ್ಯರ್ಥಿಗಳನ್ನು ಆಯ್ದುಕೊಳ್ಳುವಾಗ ಮೀಸಲಾತಿಗೆ ಧಕ್ಕೆಯಾಗದಂತೆ ವರ್ಗವಾರು ಪಟ್ಟಿಯನ್ನೂ ಸಿದ್ಧಪಡಿಸಲಾಗುವುದೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry