ಭಾನುವಾರ, ಏಪ್ರಿಲ್ 11, 2021
32 °C

ಐಒಎ ಚುನಾವಣೆ: ರಣಧೀರ್‌ಗೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಚುನಾವಣೆ ದಿನ ಕಳೆದಂತೆ ಹೊಸ ತಿರುವು ಪಡೆಯುತ್ತಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ರಣಧೀರ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿ ಒಬ್ಬೊಬ್ಬರೇ ಕಣದಿಂದ ಹಿಂದೆ ಸರಿಯುತ್ತಿದ್ದಾರೆ.

ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದ ಅವರ ಹಲವು ಬೆಂಬಲಿಗರು ಡಿಸೆಂಬರ್ 5ರ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ಸೋಮವಾರ ಕೈಗೊಂಡರು. ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದ ಭಾರತ ಕಬಡ್ಡಿ ಫೆಡರೇಷನ್ ಅಧ್ಯಕ್ಷ ಜೆ.ಎಸ್. ಗೆಹ್ಲಾಟ್ ಹಿಂದೆ ಸರಿದರು. ಇದರಿಂದ ಅಭಯ್ ಸಿಂಗ್ ಚೌತಾಲ ಬಣದ ವೀರೇಂದರ್ ನಾನಾವತಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ಭಾರತ ಜೂಡೊ ಫೆಡರೇಷನ್ ಅಧ್ಯಕ್ಷ ಜಗದೀಶ್ ಟೈಟ್ಲರ್, ರಾಷ್ಟ್ರೀಯ ರೈಫಲ್ ಸಂಸ್ಥೆ ಮುಖ್ಯಸ್ಥ ರಣೀಂದರ್ ಸಿಂಗ್ ಮತ್ತು ಅಸ್ಸಾಂ ಒಲಿಂಪಿಕ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರಕೀಬುಲ್ ಹುಸೇನ್ ಅವರೂ ನಾಮಪತ್ರ ವಾಪಸ್ ಪಡೆದುಕೊಂಡರು.ಕಾರ್ಯದರ್ಶಿ ಹುದ್ದೆಗೆ ಕಣದಲ್ಲಿದ್ದ ಮುಖೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಓಂಕಾರ್ ಸಿಂಗ್ ಮತ್ತು ಸುನೈನಾ ಕುಮಾರಿ ಅವರೂ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು.`ಐಒಎ ಚುನಾವಣೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮಾನ್ಯತೆ ಇರುವುದಿಲ್ಲ. ಆದ್ದರಿಂದ ಚುನಾವಣೆ ನಡೆಸುವುದರಲ್ಲಿ ಅರ್ಥವಿಲ್ಲ. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ' ಎಂದು ಟೈಟ್ಲರ್ ಹೇಳಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ರಣಧೀರ್ ಸಿಂಗ್ ಭಾನುವಾರ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರು. ಡಿ. 5 ರಂದು ನಡೆಯುವ ಚುನಾವಣೆಯನ್ನು ಐಒಸಿ ಒಪ್ಪಿಕೊಳ್ಳುವುದಿಲ್ಲ ಎಂಬ ಕಾರಣ ನೀಡಿ ಅವರು ಈ ಹೆಜ್ಜೆಯಿಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.