ಐಒಸಿ, ಇಐಎಲ್‌ ಷೇರು ವಿಕ್ರಯ ನಿರ್ಧಾರ

7

ಐಒಸಿ, ಇಐಎಲ್‌ ಷೇರು ವಿಕ್ರಯ ನಿರ್ಧಾರ

Published:
Updated:

ನವದೆಹಲಿ(ಪಿಟಿಐ): ಭಾರತೀಯ ತೈಲ ನಿಗಮ (ಐಒಸಿ) ಮತ್ತು ಎಂಜಿನಿಯರ್ಸ್‌ ಇಂಡಿಯಾ ಲಿ.(ಇಐಎಲ್‌) ಷೇರುಗಳನ್ನು ಜನವರಿಯಲ್ಲಿ ಹಾಗೂ ‘ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿ.’ (ಬಿಎಚ್‌ಇಎಲ್‌) ಷೇರುಗಳನ್ನು ಫೆಬ್ರುವರಿಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.‘ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರಿ ಒಡೆತನದ ಉದ್ಯಮ ಸಂಸ್ಥೆಗಳ ಷೇರು ವಿಕ್ರಯದಿಂದ ಒಟ್ಟು ₨40,000 ಕೋಟಿ ಬಂಡವಾಳ ಹಿಂತೆಗೆದುಕೊಳ್ಳಲು ಯೋಜಿಸಲಾಗಿದೆ. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ.ನಲ್ಲಿನ (ಎಚ್‌ಎಎಲ್‌) ಸರ್ಕಾರದ ಷೇರು ಪಾಲನ್ನು ಕಡಿಮೆ ಮಾಡುವ ಪ್ರಸ್ತಾವವೂ ಇದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅರವಿಂದ್‌ ಮಯಾರಾಂ ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry