ಐಒಸಿ ತಂಡಕ್ಕೆ ಜಯ

7

ಐಒಸಿ ತಂಡಕ್ಕೆ ಜಯ

Published:
Updated:

ಚೆನ್ನೈ (ಪಿಟಿಐ): ದ್ವಿತೀಯಾರ್ಧದಲ್ಲಿ  ವಿ. ರಘುನಾಥ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗಳಿಸಿದ ಮೂರು ಗೋಲು­ಗಳ ನೆರವಿನಿಂದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ತಂಡ ಇಲ್ಲಿ ನಡೆಯುತ್ತಿರುವ 88ನೇ ಅಖಿಲ ಭಾರತ ಎಂಸಿಸಿ ಮುರುಗಪ್ಪ ಗೋಲ್ಡ್‌ ಕಪ್‌ ಹಾಕಿ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 3–1 ಗೋಲುಗಳಿಂದ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ ಎದುರು ಗೆಲುವು ಸಾಧಿಸಿತು.ಭಾರತ ಪೆನಾಲ್ಟಿ ಕಾರ್ನರ್‌ ಪರಿಣತ ರಘುನಾಥ್‌ ಹ್ಯಾಟ್ರಿಕ್‌ ಗೋಲುಗಳನ್ನು ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 2–1ರಲ್ಲಿ ಭಾರತ್‌ ಪೆಟ್ರೋಲಿಯಂ ಎದುರು ಗೆಲುವು ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry