ಐಗೂರಿನಲ್ಲಿ ಮತ್ತೆ ಕಾಡಾನೆ ಹಾವಳಿ ಕೂಲಿ ಕಾರ್ಮಿಕನಿಗೆ ತೀವ್ರ ಗಾಯ

ಶನಿವಾರ, ಜೂಲೈ 20, 2019
27 °C

ಐಗೂರಿನಲ್ಲಿ ಮತ್ತೆ ಕಾಡಾನೆ ಹಾವಳಿ ಕೂಲಿ ಕಾರ್ಮಿಕನಿಗೆ ತೀವ್ರ ಗಾಯ

Published:
Updated:

ಸಕಲೇಶಪುರ: ಕಾಫಿ ತೋಟದಲ್ಲಿ ಕೆಲಸ ಮಾಡಲು ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಐಗೂರು ಗ್ರಾಪಂ ವ್ಯಾಪ್ತಿಯ ಹಾಡ್ಯ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಐಗೂರು ಗ್ರಾಮದ ಮಲ್ಲೇಶ್ (ಈರಪ್ಪ ಶೆಟ್ಟಿ) ಕಾಡಾನೆ ದಾಳಿಗೆ ಸಿಲುಕಿ ಬೆನ್ನು ಮೂಳೆ ಮುರಿದುಕೊಂಡಿದ್ದಾರೆ. ಅಲ್ಲದೆ ಎದೆ ಹಾಗೂ ಹೊಟ್ಟೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಇವರನ್ನು ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಯಿತು. ಇವರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದ ಸೋಮ ಹಾಗೂ ಗುರು ಎಂಬುವರು ಆನೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕೈ ಕಾಲುಗಳಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ.

ಮಂಗಳವಾರ ಯಡಕೇರಿ ಗ್ರಾಮದ ವನಜಾಕ್ಷಿ ಅವರನ್ನು ಸಾಯಿಸಿದ್ದ ಆನೆಯೇ ಮಲ್ಲೇಶ್ ಅವರ ಮೇಲೂ ದಾಳಿ ಮಾಡಿದೆ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry