ಐಗೇಟ್‌ನಲ್ಲಿ ವೇಮೂರಿ ವೇತನ ರೂ14.50 ಕೋಟಿ

7

ಐಗೇಟ್‌ನಲ್ಲಿ ವೇಮೂರಿ ವೇತನ ರೂ14.50 ಕೋಟಿ

Published:
Updated:

ಮುಂಬೈ(ಪಿಟಿಐ): ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿ ‘ಐಗೇಟ್‌’ಗೆ ಹೊಸದಾಗಿ ಅಧ್ಯಕ್ಷ ಹಾಗೂ ‘ಸಿಇಒ’ ಆಗಿ ನೇಮಕಗೊಂಡಿ ರುವ ಅಶೋಕ್‌ ವೇಮೂರಿ ಮೂಲ ವೇತನ ಮತ್ತು ನಗದು ಬೋನಸ್‌ ರೂಪ ದಲ್ಲಿ ವರ್ಷಕ್ಕೆ ಒಟ್ಟು 23 ಲಕ್ಷ ಅಮೆರಿ ಕನ್‌ ಡಾಲರ್‌(ರೂ14.50 ಕೋಟಿ) ಪಡೆಯಲಿದ್ದಾರೆ.ಐಐಎಂ–ಅಹಮದಾಬಾದ್‌ ಪ್ರತಿಭೆಯಾದ ವೇಮೂರಿ ಈ ಮೊದಲು ಇನ್ಫೊಸಿಸ್‌ನಲ್ಲಿದ್ದಾಗ ಪಡೆಯುತ್ತಿದ್ದ ಒಟ್ಟು ಸಂಬಳ ರೂ4.91 ಕೋಟಿಗೆ ಹೋಲಿಸಿದಲ್ಲಿ ಇದು ಮೂರು ಪಟ್ಟು ಅಧಿಕ ಮೊತ್ತಕ್ಕೆ ಹತ್ತಿರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry