ಸೋಮವಾರ, ಮೇ 23, 2022
26 °C

ಐಗೇಟ್, ಇನ್ಫಿ ಸಿಬ್ಬಂದಿ ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಜಪಾನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಎಲ್ಲ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಸಾಫ್ಟ್‌ವೇರ್ ಸಂಸ್ಥೆಗಳಾದ ಇನ್ಫೋಸಿಸ್ ಮತ್ತು ಐಗೇಟ್        ತಿಳಿಸಿವೆ.‘ಭಾರಿ ಭೂಕಂಪ ಮತ್ತು ಸುನಾಮಿಯಲ್ಲಿ ನಮ್ಮ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ಫೋಸಿಸ್ ಟೋಕಿಯೊದಲ್ಲಿಕಚೇರಿ ಹೊಂದಿದ್ದು, ಸಿಬ್ಬಂದಿ ಫುಕುವೊಕಾ ಮತ್ತು ನಗೊಯಾಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ನಗರಗಳಲ್ಲಿನ ನಮ್ಮ ಸ್ಥಳೀಯ ತಂಡಗಳು ನಮ್ಮ ಉದ್ಯೋಗಿಗಳ ಅಗತ್ಯಗಳನ್ನೆಲ್ಲ ಒದಗಿಸಲು ನೆರವು ನೀಡುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 1996ರಲ್ಲಿ ಜಪಾನ್‌ನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಇನ್ಫೋಸಿಸ್, 1997ರಲ್ಲಿ ಟೋಕಿಯೊದಲ್ಲಿ ಕಚೇರಿ ತೆರೆದಿದೆ. ಭಾರತದಿಂದ ಎರವಲು ಸೇವೆಗೆ ಹೋದವರೂ ಸೇರಿದಂತೆ ಅಲ್ಲಿ 250ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.