ಐಚ್ಚೆಟ್ಟಿರ ಹಾಕಿ ಕಪ್-2012- ಸೋಮಯ್ಯ ಹ್ಯಾಟ್ರಿಕ್: ಚೇನಂಡ ಜಯಭೇರಿ

7

ಐಚ್ಚೆಟ್ಟಿರ ಹಾಕಿ ಕಪ್-2012- ಸೋಮಯ್ಯ ಹ್ಯಾಟ್ರಿಕ್: ಚೇನಂಡ ಜಯಭೇರಿ

Published:
Updated:

ಸಿದ್ದಾಪುರ:   ಚೇನಂಡ ಸೋಮಯ್ಯ `ಹ್ಯಾಟ್ರಿಕ್~ ಗೋಲುಗಳ ಸಾಧನೆಯಿಂದ ಚೇನಂಡ ತಂಡವು ಅಮ್ಮತ್ತಿಯಲ್ಲಿ ನಡೆಯುತ್ತಿರುವ `ಐಚ್ಚೆಟ್ಟಿರ ಹಾಕಿ ಕಪ್-2012~ ಕೊಡವ ಕುಟುಂಬಗಳ ಹಾಕಿ ಟೂರ್ನಿಯಲ್ಲಿ ಜೇನಂಡ ತಂಡವು ಜಯ ಸಾಧಿಸಿತು. ಚೇನಂಡ ತಂಡವು 5-1ರಿಂದ ಕಟ್ಟೇರ ತಂಡವನ್ನು ಸೋಲಿಸಿತು. ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು 1-1 ಗೋಲು ಸಮಬಲ ಸಾಧಿಸಿದ್ದವು. ಆದರೆ ಸೋಮಯ್ಯ ಅವರ ಹ್ಯಾಟ್ರಿಕ್ ಸಾಧನೆಯ ಮುಂದೆ ಕಟ್ಟೇರ ತಂಡದ ಸೋಲಿನತ್ತ ಜಾರಿತು.  ಚೇನಂಡದ ದಿನೇಶ್ ತಿಮ್ಮಯ್ಯ ಮತ್ತು ಬೋಪಣ್ಣ ತಲಾ ಒಂದು ಗೋಲು ದಾಖಲಿಸಿದರು.ಇನ್ನೊಂದು ಪಂದ್ಯದಲ್ಲಿ ಮುಂಡೋಟ್ಟೀರ ತಂಡವು 4-1ರಿಂದ ಮಂದಪಂಡ ತಂಡದ ವಿರುದ್ಧ ಜಯಿಸಿತು. ಮುಂಡೋಟ್ಟೀರ ತಂಡದ ಪರವಾಗಿ ಪವನ್ 2, ಚೇತನ್1 ಹಾಗೂ ಕರುಣ್ 1 ಗೋಲು ದಾಖಲಿಸಿದರೆ ಮಂದಪಂಡದ ಎನ್.ಪೂವಣ್ಣ 1 ಗೋಲು ದಾಖಲಿಸಿದರು.ಮಾಚಿಮಂಡ ಮತ್ತು ಕುಟ್ಟೇಟ್ಟಿರ ತಂಡಗಳ ಮಧ್ಯದ ಪಂದ್ಯದಲ್ಲಿ ನಿತೀಶ್ ದೇವಯ್ಯ ದಾಖಲಿಸಿದ 3 ಗೋಲುಗಳ ನೆರವಿನಿಂದ ಮಾಚಿಮಂಡ ತಂಡವು 3-1ರಿಂದ  ಕುಟ್ಟೆಟ್ಟೀರ ತಂಡದ ವಿರುದ್ಧ ಗೆದ್ದಿತು. ಕುಟ್ಟೇಟ್ಟಿರ ತಂಡದ ಪರವಾಗಿ ನಂಜಪ್ಪ 1ಗೋಲು ದಾಖಲಿಸಿದರು.ಚೇಂದಂಡ 3-1ರಿಂದ ಅಪ್ಪಾರಂಡ  ತಂಡವನ್ನು ಸೋಲಿಸಿತು. ವಿಜೇತ ತಂಡದ ಪರವಾಗಿ ಸೋನು 2 ಮತ್ತು ರೋಶನ್ 1 ಗೋಲು ಹೊಡೆದರೆ,  ಅಪ್ಪಾರಂಡ ತಂಡದ ಪರವಾಗಿ ಸುಧೀರ್ 1ಗೋಲು ದಾಖಲಿಸಿದರು.ಮೂಕೋಂಡ ತಂಡವು 3-1ರಿಂದ ಪಾಂಡಂಡ ತಂಡವನ್ನು ಸೋಲಿಸಿತು.  ಮೂಕೋಂಡ ಸಚಿನ್, ಕಾರ್ಯಪ್ಪ ಹಾಗೂ ಉಮೇಶ್ ತಲಾ ಒಂದೊಂದು ಗೋಲು ದಾಖಲಿಸಿ ತಮ್ಮ ತಂಡದ ಗೆಲುವಿಗೆ ರೂವಾರಿಗಳಾದರೆ ಪಾಡಂಡ ತಂಡದ ಪರವಾಗಿ ವಚನ್ 1 ಮತ್ತು 1 ಗೋಲು ದಾಖಲಿಸಿದರು.ಬಾರಿಯಂಡ ಮತ್ತು ಕಂಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಯಂಡ ತಂಡ 2 ಗೋಲು ದಾಖಲಿಸಿ ಮುನ್ನಡೆದರೆ ಕಂಗಂಡ ತಂಡ 1ಗೋಲು ದಾಖಲಿಸಿತ್ತು. ಉಭಯ ತಂಡಗಳು 1-1 ಗೋಲು ದಾಖಲಿಸಿ ಸಮಬಲ ಪ್ರದರ್ಶಿಸಿದರೂ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಬಾರಿಯಂಡ ತಂಡ ಮತ್ತೊಂದು ಗೋಲು ದಾಖಲಿಸಿ ಗೆಲುವು ಸಾಧಿಸಿತು.ಮುಕ್ಕಾಟೀರ (ಬೋಂದ) ತಂಡವು ನೆರಪಂಡ ತಂಡದ ವಿರುದ್ಧ  ಏಕಪಕ್ಷೀಯವಾಗಿ 5 ಗೋಲು ದಾಖಲಿಸಿ ಎದುರಾಳಿ ತಂಡವನ್ನು ಹಣಿಯಿತು. ನೆರಪಮಡ ತಂಡ ಕೊನೆಯವರೆಗೂ ಹೋರಾಟ ನಡೆಸಿದರೂ ಯಾವುದೇ ಗೋಲು ದಾಖಲಿಸಲಾಗದೇ ತೆರೆಮರೆಗೆ ಸರಿಯಿತು.

 

ಸೋಮಯ್ಯ 2, ಐಯ್ಯಪ್ಪ 1, ನಿರನ್ 1, ವಸಂತ್ 1 ಗೋಲು ದಾಖಲಿಸಿದರು. ಚೆಪ್ಪುಡೀರ ತಂಡವೂ ಬೊಳಚೆಟ್ಟೀರ ತಂಡದ ವಿರುದ್ಧ  4-0ಯಿಂದ ಮುನ್ನಡೆ ಸಾಧಿಸಿತು. ಚೆಪ್ಪುಡೀರ ಚೇತನ್, ಸಮೃದ್ಧ ನಂಜಪ್ಪ ತಲಾ 2 ಗೋಲು ದಾಖಲಿಸಿದರು. ಕಲ್ಲಂಗಡ ಮತ್ತು ಬೊಳ್ಳಾರಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲ್ಲಂಗಡ ತಂಡ 3-0ಯಿಂದ ಜಯ ಸಾಧಿಸಿತು. ಕಲ್ಲಂಗಡ ತಂಡದ ಪರವಾಗಿ ಗಣಪತಿ 2 ಮತ್ತು ತಿಮ್ಮಣ್ಣ 1 ಗೋಲು ದಾಖಲಿಸಿದರು. ಕರ್ತಮಾಡ ತಂಡ ಕಾಂಡೇರ ತಂಡದ ವಿರುದ್ಧ ಎಕಪಕ್ಷೀಯವಾಗಿ 3 ಗೋಲು ದಾಖಲಿಸಿ ಗೆದ್ದಿತ್ತು. ಬೆಳ್ಯಪ್ಪ 2 ಮತ್ತು ರಿಕಿ ಗಣಪತಿ 1 ಗೋಲು ದಾಖಲಿಸಿದರು. ಮಲಚಿರ ಮತ್ತು ಬೊಟ್ಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು 1-1 ಗೋಲು ದಾಖಲಿಸಿ ಸಮಬಲ ಹೊಂದಿದ್ದರಿಂದ ಟೈ ಬ್ರೇಕರ್ ನಿಯಮ ಪ್ರವೇಶಿಸಬೇಕಾಯಿತ್ತು. ಮಲಚಿರ ಶಾನ್ 1 ಗೋಲು ದಾಖಲಿಸಿದರೆ ಬೊಟ್ಟೋಳಂಡ ಬಿದ್ದಪ್ಪ ಒಂದು ಗೋಲು ದಾಖಲಿಸಿದ್ದರು. ಟೈ ಬ್ರೇಕರ್‌ನಲ್ಲಿ ಮಲಚಿರ ತಂಡ 3 ಗೋಲು ದಾಖಲಿಸಿದರೆ ಬೊಟ್ಟೋಳಂಡ ತಂಡ 1 ಗೋಲು ದಾಖಲಿಸಿ ಸೋತಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry