ಶನಿವಾರ, ಮೇ 8, 2021
20 °C

ಐಟಂ ಒಲ್ಲದ ಮನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮೈ ನೇಮ್ ಈಸ್ ಶೀಲಾ~ ಇರಲಿ, `ಮುನ್ನಿ ಬದನಾಮ್ ಹುಯಿ~ ಐಟಂ ಸಾಂಗಿರಲಿ ಜನಪ್ರಿಯ ಹಾಡುಗಳೆನಿಸಿದವು. ಇಂಥ ಹಾಡುಗಳ ಜಾಡು ಹಿಡಿದುಬಂದ `ಜಲೇಬಿ ಬಾಯಿ~ ಅಥವಾ ವೀನಾ ಮಲ್ಲಿಕ್ ನರ್ತನದ `ಛನ್ನೊ ಛನ್ನೊ~ ಹಾಡಿರಲಿ ಮಕ್ಕಳೂ ಇವನ್ನೇ ಉಲಿಯುತ್ತಿವೆ.ಇಂಥ ಹಾಡುಗಳ ಪರಂಪರೆ ಹೊಸತೇನಲ್ಲ. ದಿಲ್‌ಸೆಯ `ಛಂಯ್ಯಾ.. ಛಂಯ್ಯಾ..~ ಹಾಡಿನಿಂದಲೇ ಇಂಥ ಧುನ್‌ಗಳ ಗಾಳಿ ಬೀಸತೊಡಗಿತು. ಮುನ್ನಾಭಾಯ್ ಚಿತ್ರದ `ದೇಖ್‌ಲೆ...~ ಪರಿಣಿತಾ ಚಿತ್ರದ `ಕೈಸಿ ಪಹೇಲಿ ಜಿಂದಗಾನಿ~ ಹಾಡು ಸಹ ಜನರ ನೆನಪಿನಲ್ಲುಳಿಯಿತು.ಈ ಎರಡೂ ಹಾಡುಗಳಲ್ಲಿ ಪ್ರೇಮ, ವಿರಹ, ಜೀವನಪ್ರೀತಿಯ ಗಂಧಗಳು ಗಾಢವಾಗಿದ್ದವು. ಆದರೆ ತೀರಾ `ಬೀಡಿ ಜಲೈಲೆ..~ `ಮುನ್ನಿ ಬದನಾಮ್ ಹುಯಿ~ ತರಹದ ಹಾಡುಗಳಲ್ಲಿ ಭಾವಕ್ಕಿಂತ ಭಾವೋದ್ವೇಗವಿದೆ ಅಂತಾರೆ.ಚಲನಚಿತ್ರಗಳಲ್ಲೆಗ ಉತ್ತಮ ಸಂಗೀತ ಬೇಕಿಲ್ಲ. ಜನಪ್ರಿಯ ಸಂಗೀತ ಬೇಕಿದೆ ಎಂಬುದು ಬಹುತೇಕ ಗಾಯಕರ ದೂರು ಆಗಿದೆ. ಕೈಲಾಶ್ ಖೇರ್ ಆಗಿರಲಿ, ಶಾನ್ ಆಗಿರಲಿ ಅವರೆಲ್ಲ ಇಂಥ ಹಾಡುಗಳಿಂದ ಬೇಸತ್ತಿದ್ದಾರೆ. ಇಂಥ ಹಾಡುಗಳನ್ನು ಮನದುಂಬಿ ಹಾಡಲಾಗುವುದೇ ಇಲ್ಲ. ಕೇವಲ ವೃತ್ತಿಯೆಂದುಕೊಂಡು ಹಾಡುತ್ತೇವೆ ಎಂದು ಶಾನ್ ಹೇಳಿದ್ದಾರೆ.ಇವರಿಬ್ಬರ ಸಾಲಿಗೆ ಅಗ್ನೀ ಬ್ಯಾಂಡ್‌ನ ಕೆ.ಮೋಹನ್ ಹಾಗೂ ಸುನಿಧಿ ಚೌಹಾಣ್ ಕೂಡ ಧ್ವನಿಗೂಡಿಸಿದ್ದಾರೆ.ಕೆ. ಮೋಹನ್ ಅಂತೂ ಇನ್ನು ಮೇಲೆ ಜನಪ್ರಿಯ ಗೀತೆಗಳ ಗೋಜಿಗೆ ಹೋಗುವುದೇ ಇಲ್ಲ ಎಂದು ಘೋಷಿಸಿದ್ದಾರೆ. ಇನ್ನು ಏನಿದ್ದರೂ ಪ್ರಾಮಾಣಿಕ ಎನಿಸುವ ಉತ್ತಮ ಸಂಗೀತ ಸಂಯೋಜನೆಗೆ ಮಾತ್ರ ಆದ್ಯತೆ ಎಂದು ಹೇಳಿಕೊಂಡಿದ್ದಾರೆ. ರಾಕ್ ಹಾಗೂ ಆಪ್ತ ಸೂಫಿಯಾನ ಸಂಗೀತಕ್ಕೆ ಹೆಸರಾಗಿರುವ ಅಗ್ನಿ ಬ್ಯಾಂಡ್‌ನ ನಿರ್ಧಾರ ಇದು ಎಂದು ಹೇಳಿದ್ದಾರೆ.`ಆಹಟೇಂ~, `ಕಬೀರಾ~, ಮುಂತಾದ ಗೀತೆ ಸಂಯೋಜನೆ ಮಾಡಿರುವ ಮೋಹನ್ ಪ್ರಕಾರ ಸಂಗೀತಗಾರರೇ ಇಂಥ ಪ್ರಯತ್ನಗಳಿಂದ ದೂರವಾಗಬೇಕು. ಜನ ಬಯಸುತ್ತಾರೆ ಎಂದು ಸಂಗೀತಗಾರರು ಸಾಹಿತ್ಯ ರಚನಾಕಾರರು ಕೊಡಬೇಕಾಗಿಲ್ಲ. ಸಾಹಿತ್ಯ ಮತ್ತು ಸಂಗೀತ ರಚನಾಕಾರರು ನೀಡುವುದನ್ನೇ ಜನರು ಸ್ವೀಕರಿಸುತ್ತಾರೆ. ಕೆಟ್ಟ ಅಭಿರುಚಿಯನ್ನು ಬೆಳೆಸುವಲ್ಲಿ ಇವೆಲ್ಲವೂ ಎಣಿಕೆಗೆ ಬರುತ್ತವೆ.ಉತ್ತಮ ಸಂಗೀತ ನೀಡಬೇಕೆಂದು ನಿರ್ಧರಿಸಿದವರು ಇಂಥ ಹಾಡುಗಳಿಂದ ದೂರ ಉಳಿಯಬೇಕು. ನಿರ್ದೇಶನದಿಂದಲೂ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸುನಿಧಿ ಚೌಹಾಣ್ ಬಾಲಿವುಡ್‌ಗೆ ಈಗ ಸಂಗೀತಗಾರರು ಬೇಕಾಗಿಲ್ಲ. ನಿರ್ಮಾಪಕರು ಬಯಸಿದಂತೆ ಹಾಡನ್ನು `ಹೇಳುವವರು~ ಬೇಕಾಗಿದ್ದಾರೆ.ಈ ಟ್ರೆಂಡ್ ಅದೆಷ್ಟು ದಿನ ಮುಂದುವರಿಯುವುದೋ ಗೊತ್ತಿಲ್ಲ. ಆದರೆ ಇಂಥ ಸಂಗೀತಕ್ಕೆ ಯಾವುದೇ ಆಯಸ್ಸಿಲ್ಲ. 17 ವರ್ಷಗಳ ಸಂಗೀತ ಕ್ಷೇತ್ರದ ಒಡನಾಟದಲ್ಲಿದ್ದರೂ ನನಗೆ ಕೇವಲ ವೇಗದ, ಉದ್ವೇಗ ಹಾಗೂ ಉನ್ಮಾದದ ಹಾಡುಗಳೇ ದೊರೆತಿವೆ.ಮೂಲತಃ ನಾನು ಸಂಗೀತಗಾರ್ತಿ. ನಿಧಾನಗತಿಯ, ಮನಮುಟ್ಟುವ, ಮನಸಿಗೆ ಆಪ್ತವೆನಿಸುವ ಹಾಡುಗಳನ್ನೂ ನಾನು ಹಾಡಬಲ್ಲೆ. ಆದರೆ ಕೇವಲ ಕುಣಿತದ, ಹುಚ್ಚೆಬ್ಬಿಸುವ ಹಾಡುಗಳನ್ನು ಮಾತ್ರ ಹಾಡಿರುವ ಬಗ್ಗೆ ನನಗೆ ಕೆಲವೊಮ್ಮೆ ಅಸಮಾಧಾನವೆನಿಸುತ್ತದೆ ಎಂದೂ ಸುನಿಧಿ ಹೇಳಿದ್ದಾರೆ.ಜನಪ್ರಿಯ ಸಂಗೀತ ಹಾಗೂ ಉತ್ತಮ ಸಂಗೀತದ ಬಗ್ಗೆ ಬಾಲಿವುಡ್‌ನಲ್ಲೆಗ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಇದಕ್ಕೆಲ್ಲ ಕೊಲವೆರಿ ಡಿ ಹಾಡನ್ನು ಜಾವೇದ್ ಅಖ್ತರ್ ಟೀಕಿಸಿದ್ದೇ ನಾಂದಿ ಪದವಾಗಿತ್ತು. ಈಗ ಕೊಲವೆರಿ ಡಿ ಅಭಿರುಚಿಯನ್ನು ಹಾಳುಗೆಡುವುತ್ತದೆ ಎಂದು ಕೇರಳದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣ ದಾಖಲಾಗಿದೆ.

ಚಿತ್ರಸಂಗೀತ ಈ ಐಟಂ ಗುಂಗಿನಿಂದ ಇನ್ನಾದರೂ ಹೊರಬರಬಹುದೇ ಎಂಬುದೇ ಪ್ರಶ್ನೆಯಾಗಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.