ಐಟಂ ಒಲ್ಲೆ ಎಂದರು ರಿಯಾ!

7

ಐಟಂ ಒಲ್ಲೆ ಎಂದರು ರಿಯಾ!

Published:
Updated:
ಐಟಂ ಒಲ್ಲೆ ಎಂದರು ರಿಯಾ!

`ಏಕ್ ಬುರಾ ಆದ್ಮಿ~ ಚಿತ್ರದ ಸೆಟ್ ಅದು. ನಾಯಕ ಅರುಣೋದಯ ಸಿಂಗ್, ನಿರ್ದೇಶಕ ಇಶ್ರಾಕ್ ಶಾ, ನಾಯಕಿ ರಿಯಾ ಸೇನ್‌ಗಾಗಿ ಕಾಯುತ್ತಿದ್ದರು. ಅಂದು ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ತಡವಾಗಿ ಸೆಟ್‌ಗೆ ಬಂದ ರಿಯಾ, `ಇಂಥ ಡಾನ್ಸ್‌ಗೆ ತನಗೆ ತಾಲೀಮಿನ ಅಗತ್ಯ ಇದೆ. ಹುಷಾರಿಲ್ಲದ ಕಾರಣ ತನಗೆ ತಾಲೀಮು ಮಾಡಲು ಆಗಲಿಲ್ಲ. ಅಲ್ಲದೇ ಇದು ಐಟಂ ಡಾನ್ಸ್‌ನಂತಿದೆ. ತಾನು ಐಟಂ ಡಾನ್ಸ್ ಮಾಡುವ ಹುಡುಗಿಯಲ್ಲ. ಇಂಥ ಹಾಡಿನಲ್ಲಿ ನರ್ತಿಸುವ ಅಗತ್ಯ ತನಗಿಲ್ಲ~ ಎಂದು ತಕರಾರು ತೆಗೆದು ಸೆಟ್‌ನಿಂದ ಹೊರನಡೆದಳಂತೆ. ಈ ಘಟನೆಯನ್ನು ವಿವರಿಸಿರುವ ನಿರ್ದೇಶಕರು `ಈ ಮೊದಲೇ ಐಟಂ ಹಾಡಿನಲ್ಲಿ ನರ್ತಿಸುವ ಅಗತ್ಯ ಇದೆ ಎಂದು ಹೇಳಲಾಗಿತ್ತು. ಆದರೂ ರಿಯಾ ಸುಳ್ಳೇ ತಕರಾರು ತೆಗೆದಿದ್ದಾಳೆ~ ಎಂದಿದ್ದಾರೆ. ರಿಯಾಳ ತಕರಾರಿನಿಂದಾಗಿ ನಿರ್ಮಾಪಕರಿಗೆ 70-80 ಲಕ್ಷ ರೂಪಾಯಿ ನಷ್ಟವಾಗಿದೆಯಂತೆ.

ಆದರೆ ರಿಯಾ ಹೇಳುವುದೇ ಬೇರೆ. `ನಾಯಕ ನಟ ಅಮೆರಿಕಾಗೆ ಹೋಗಬೇಕಿದ್ದ ಕಾರಣ, ನನಗೆ ತಾಲೀಮು ಮಾಡಲು ಅವಕಾಶ ನೀಡದೆ ಸೆಟ್‌ಗೆ ಕರೆಸಿಕೊಂಡರು. ಹುಷಾರಿಲ್ಲದಿದ್ದರೂ ನಾನು ಸೆಟ್‌ಗೆ ಹೋದೆ. ಸೆಟ್‌ನಲ್ಲಿ ಅವರ ನಿರೀಕ್ಷೆಗೆ ತಕ್ಕಂತೆ ನರ್ತಿಸುವುದು ನನ್ನಿಂದ ಆಗಲಿಲ್ಲ. ಆದ್ದರಿಂದ ಒಲ್ಲೆ ಎಂದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಈ ಸಮಯದಲ್ಲಿ ಪ್ರಚಾರದ ಆಸೆಯಿಂದ ಇಂಥ ಮಾತುಗಳನ್ನಾಡುತ್ತಿದ್ದಾರೆ~ ಎಂದು ತಿರುಗೇಟು ನೀಡಿದ್ದಾಳೆ. ಸದ್ಯ ರಿಯಾ ಅಮ್ಮ ಮೂನ್‌ಮೂನ್ ಸೇನ್ ಸಮಸ್ಯೆ ಪರಿಹರಿಸಲು ಮಧ್ಯ ಪ್ರವೇಶಿಸಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry