ಐಟಂ ಕುಣಿತ ಒಲ್ಲೆ : ಅಸಿನ್

ಗುರುವಾರ , ಜೂಲೈ 18, 2019
28 °C

ಐಟಂ ಕುಣಿತ ಒಲ್ಲೆ : ಅಸಿನ್

Published:
Updated:

ಕಳೆದ ವಾರ ಅಸಿನ್ ಅಭಿನಯದ `ಬೋಲ್ ಬಚ್ಚನ್~ ಚಿತ್ರ ಬಿಡುಗಡೆಯಾಯಿತು. ಅದು ಕಾಮಿಡಿ ಪ್ರಧಾನ ಚಿತ್ರ. ಅದರ ಹಿಂದೆ ಬಂದಿದ್ದ `ಹೌಸ್‌ಫುಲ್-2~, `ರೆಡಿ~ ಚಿತ್ರಗಳಲ್ಲೂ ಹಾಸ್ಯವೇ ಬಂಡವಾಳ. ಹಾಗಾಗಿ ಕಾಮಿಡಿ ಸಿನಿಮಾಗಳಿಗೆ ಮಾತ್ರ ಅಸೀನ್ ಸೀಮಿತವಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಅವರ ಮುಂದೆ ಇಡಲಾಯಿತು. ಅದಕ್ಕೆ ಉತ್ತರಿಸಿರುವ ಅಸಿನ್, `ಒಂದರ್ಥದಲ್ಲಿ ಹೌದು. ನಾನು ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮುಂದಿನ `ಕಿಲಾಡಿ 786~ ಚಿತ್ರ ಆಕ್ಷನ್ ಪ್ರಧಾನವಾಗಿದ್ದರೂ ಅಕ್ಷಯ್ ಕುಮಾರ್ ಇರುವುದರಿಂದ ಕಾಮಿಡಿಯೂ ಇದ್ದೇ ಇರುತ್ತದೆ. ನನಗೆ ಸಿಗುವ ಒಳ್ಳೆಯ ಅವಕಾಶಗಳ ಮೇಲೆ ಪಾತ್ರಗಳು ನಿರ್ಧಾರವಾಗುತ್ತಿವೆಯೇ ಹೊರತು ನಾನಾಗಿ ಕಾಮಿಡಿಯನ್ನು ಆರಿಸಿಕೊಳ್ಳುತ್ತಿಲ್ಲ~ ಎಂದಿದ್ದಾರೆ.

ತಾವು ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಆರೋಪ ಇದೆ ಎಂಬ ಪ್ರಶ್ನೆಗೆ, `ದಕ್ಷಿಣ ಭಾರತದ ಸಿನಿಮಾಗಳಿಂದ ಅವಕಾಶಗಳಿವೆ. ಆದರೆ ಅದೆಲ್ಲಾ ನಾನು ಹಿಂದೆ ನಿರ್ವಹಿಸಿದ ರೀತಿಯ ಪಾತ್ರಗಳೇ. ವಿಭಿನ್ನ ಎನಿಸುವ ಪಾತ್ರ ಸಿಕ್ಕರೆ ಖಂಡಿತ ನಟಿಸುವೆ~ ಎಂದು ಉತ್ತರಿಸಿದ್ದಾರೆ. ಮಾತು ಮುಗಿಸುವ ಮುನ್ನ ಅವರು ಕಿಡಿ ಕಾರಿದ್ದು ಐಟಂ ನರ್ತನದ ಬಗ್ಗೆ. `ನನಗೆ ಐಟಂ ನರ್ತನಕ್ಕೆ ಅವಕಾಶಗಳು ಬಂದಿಲ್ಲ. ಬಂದರೂ ನಾನು ಮಾಡುವುದಿಲ್ಲ. ಅದು ನಮ್ಮ ಪ್ರತಿಭೆಯನ್ನು ತುಳಿಯುವ ಅಸ್ತ್ರ. ನಾನು ಉತ್ತಮ ನೃತ್ಯಗಾತಿಯೇನೋ ಹೌದು. ಆದರೆ ಅಂಥ ನೃತ್ಯ ಮಾಡಿ ಅವಮಾನಕ್ಕೆ ಗುರಿಯಾಗಲಾರೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry