ಐಟಿಎಫ್ ಟೆನಿಸ್: ಪ್ರೇರಣಾ ಭಾಂಬ್ರಿಗೆ ಆಘಾತ

7

ಐಟಿಎಫ್ ಟೆನಿಸ್: ಪ್ರೇರಣಾ ಭಾಂಬ್ರಿಗೆ ಆಘಾತ

Published:
Updated:

ಬೀದರ್: ಭಾರತದ ಪ್ರೇರಣಾ ಭಾಂಬ್ರಿ ಇಲ್ಲಿ ನಡೆಯುತ್ತಿರುವ 5.5 ಲಕ್ಷ ರೂಪಾಯಿ ಬಹುಮಾನ ಮೊತ್ತದ `ಬೀದರ್ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ~ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು.ಎರಡನೇ ದಿನವಾದ ಮಂಗಳವಾರ ಪಂದ್ಯಗಳು ಮಳೆಯಿಂದಾಗಿ ನಿಗದಿತ ಅವಧಿಗಿಂತ ವಿಳಂಬವಾಗಿ ಆರಂಭವಾಗಿದ್ದು, ದಿನದ ವಾತಾವರಣ ತಂಪಾಗಿತ್ತು. ಆದರೆ, ಚಾಂಪಿಯನ್ ಪ್ರೇರಣಾ ಭಾಂಬ್ರಿ ಅವರಿಗೆ ದಿನದ ಫಲಿತಾಂಶ ಹಿತಕರವಾಗಿರಲಿಲ್ಲ.ಥಾಯ್ಲೆಂಡ್‌ನ ವರುಣ್ಯಾ ವೊಂಗ್ಟಿಚಾಯಿ ಅವರ ವಿರುದ್ಧ  ಪ್ರೇರಣಾ 5-7, 3-6 ರಲ್ಲಿ ಪರಾಭವಗೊಳ್ಳುವ ಮೂಲಕ ನಿರಾಸೆ ಅನುಭವಿಸಿದರು. ಗುಲ್ಬರ್ಗದಲ್ಲಿ ಈಚೆಗಷ್ಟೆ ಮುಗಿದ ಐಟಿಎಫ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಪ್ರೇರಣಾ ಭಾಂಬ್ರಿ ಇಲ್ಲಿ ಮೊದಲ ಸುತ್ತಿನಲ್ಲೇ ಪರಾಭವಗೊಂಡದ್ದು ಅಚ್ಚರಿಗೆ ಕಾರಣವಾಯಿತು.ಆಕರ್ಷಕ ಗ್ರೌಂಡ್ ಷಾಟ್‌ಗಳ ಮೂಲಕ ವಿಶ್ವಾಸದ ಆಟ ಪ್ರದರ್ಶಿಸಿದ  1018ನೇ ರ‌್ಯಾಂಕಿಂಗ್‌ನ ವರುಣ್ಯಾ 802ನೇ ರ‌್ಯಾಂಕಿಂಗ್‌ನ ಪ್ರೇರಣಾ ಅವರ ವಿರುದ್ಧ ನೇರ ಸೆಟ್‌ಗಳಿಂದ ಜಯಗಳಿಸಿದರು.ಮೊದಲ ಸೆಟ್‌ನಲ್ಲಿ 7-5 ರಿಂದ ಮುನ್ನಡೆದ ವರುಣ್ಯಾ ಎರಡನೇ ಸೆಟ್ ಅನ್ನು 6-3 ಪಾಯಿಂಟ್‌ಗಳಿಂದ ನಿರಾಯಾಸವಾಗಿ ಗೆದ್ದರು. ಪಂದ್ಯ ಉಳಿಸಿಕೊಳ್ಳುವ ಪ್ರೇರಣಾ ಅವರ ಯತ್ನ ವಿಫಲವಾಯಿತು.ದಿನದ ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ಐಟಿಎಫ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದ ಮೂರನೇ ಶ್ರೇಯಾಂಕದ ಆಟಗಾರ್ತಿ ಝೀ ಯಾಂಗ್ ಅವರು ಜಪಾನ್‌ನ ರಿಸಾ ಹಸೆಗಾವಾ ವಿರುದ್ಧ 6-2, 6-3 ರಿಂದ ಜಯಗಳಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದರು.ಹಾಂಕಾಂಗ್‌ನ  ವಿಂಗ್ ಯೂ ಚಾನ್ ಅವರು ಥಾಯ್ಲೆಂಡ್‌ನ ನಪಾಟ್ಸಾ ಕೊರ್ನ್ ಸಾಂಕ್ಯೂ ವಿರುದ್ಧ 6-1, 6-0 ಸೆಟ್‌ಗಳಿಂದ ಜಯ ಸಾಧಿಸಿದರೆ, ತೈಪೆಯ ಚಿಯಾ ಸಿನ್ ಯಾಂಗ್ ಅವರು ಫ್ರಾನ್ಸ್‌ನ ಅಗತೆ ಟಿಮ್ಸಿಟ್ ವಿರುದ್ಧ 6-4, 6-4 ಸೆಟ್‌ಗಳಿಂದ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry