ಐಟಿಎಫ್ ಟೆನಿಸ್: ಫೈನಲ್ಗೆ ರಿಷಿಕಾ
ಕೋಲ್ಕತ್ತ (ಪಿಟಿಐ): ನೇರ ಸೆಟ್ಗಳ ಅಂತರದಲ್ಲಿ ಪ್ರಾರ್ಥನಾ ತಾಂಬ್ರೆ ಅವರನ್ನು ಮಣಿಸಿದ ರಿಷಿಕಾ ಸುಂಕರ್ ಇಲ್ಲಿ ನಡೆಯುತ್ತಿರುವ ಎನ್ಬಿಸಿಸಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿನ ಬಿಟಿಎ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಿಷಿಕಾ 7-5, 6-1ರಲ್ಲಿ ಪ್ರಾರ್ಥನಾ ಅವರನ್ನು ಮಣಿಸಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟರು. ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಹಾಂಕಾಂಗ್ನ ಕ್ಯಾಥರಿನ್ ಅವರನ್ನು ಎದುರಿಸಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.