ಐಟಿಎಫ್ ಟೆನಿಸ್: ಸೆಮಿಗೆ ವೈಜಯಂತ್

7

ಐಟಿಎಫ್ ಟೆನಿಸ್: ಸೆಮಿಗೆ ವೈಜಯಂತ್

Published:
Updated:

ಮಂಡ್ಯ: ಅಗ್ರ ಶ್ರೇಯಾಂಕದ ವೈಜಯಂತ್ ಮಲಿಕ್ ಪ್ರೇಮ್ ಶುಗರ್ಸ್‌ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ಸೆಮಿಫೈನಲ್ ಪ್ರವೇಶಿಸಿದರು.ಪಿಇಟಿ ಕೋರ್ಟ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ವೈಜಯಂತ್ ಒಂದು ಗಂಟೆ 43 ನಿಮಿಷ ಹೋರಾಟ ನಡೆಸಿ 6-4, 7-5ರಲ್ಲಿ ಚೀನಾದ ಬೋವೆನ್ ಒಯಂಗ್ ಎದುರು ಗೆಲುವು ಪಡೆದರು.ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಇನ್ನಷ್ಟು ಪಂದ್ಯಗಳಲ್ಲಿ ಎರಡನೆ ಶ್ರೇಯಾಂಕದ ರಂಜಿತ್ ಮುರುಗೇಶನ್ 6-4, 6-0ರಲ್ಲಿ ವಿಘ್ನೇಶ್ ವೀರವರ್ಧನ್ ಮೇಲೂ, ಎನ್. ಶ್ರೀರಾಮ್ ಬಾಲಾಜಿ 6-2, 6-4ರಲ್ಲಿ ಕೆ. ವಿನಾಯಕ ಶರ್ಮ ವಿರುದ್ಧವೂ, ಭಾರತದ ಸಾಕೇತ್ ಎಂ. 6-3, 6-4ರಲ್ಲಿ ಫ್ರಾನ್ಸ್‌ನ ಸೆಬಾಸ್ಟಿಯನ್ ಬ್ಲೆಟ್ಜ್ ಮೇಲೂ ಗೆಲುವು ಪಡೆದು ನಾಲ್ಕರ ಘಟ್ಟ ಪ್ರವೇಶಿಸಿದರು.ಸೆಮಿಫೈನಲ್‌ನಲ್ಲಿ ವೈಜಯಂತ್-ಶ್ರೀರಾಮ್ ಮತ್ತು ರಂಜಿತ್-ಸಾಕೇತ್ ಪೈಪೋಟಿ ನಡೆಸಲಿದ್ದಾರೆ.

ಫೈನಲ್‌ಗೆ ಶ್ರೀರಾಮ್-ಅರುಣ್: ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಶ್ರೀರಾಮ್ ಹಾಗೂ ಅರುಣ್ ಪ್ರಕಾಶ್ ರಾಜಗೋಪಾಲನ್ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು.

 

ಈ ಜೋಡಿ ನಾಲ್ಕರ ಘಟ್ಟದಲ್ಲಿ 60 ನಿಮಿಷ ಹೋರಾಟ ನಡೆಸಿ 6-2, 6-4ರಲ್ಲಿ ಕುನಾಲ್ ಆನಂದ್-ಅಜಯ್ ಸೆಲ್ವರಾಜನ್ ಎದುರು ಗೆಲುವು ಪಡೆಯಿತು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಸಾಕೇತ್-ಬೊವೆನ್ ಜೋಡಿ 6-3, 7-6ರಲ್ಲಿ ವೈಜಯಂತ್-ವಿವೇಕ್ ಶೂಕೇನ್ ಅವರನ್ನು ಮಣಿಸಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry