ಐಟಿಐ: ರೂ 382 ಕೋಟಿ ನಷ್ಟ

ಶುಕ್ರವಾರ, ಜೂಲೈ 19, 2019
24 °C

ಐಟಿಐ: ರೂ 382 ಕೋಟಿ ನಷ್ಟ

Published:
Updated:

ಬೆಂಗಳೂರು: ಮಾರ್ಚ್ 31ಕ್ಕೆ ಕೊನೆಗೊಂಡ 2010-11ನೇ ಸಾಲಿನ ಹಣಕಾಸು ವರ್ಷದಲ್ಲಿ `ಐಟಿಐ~ ಲಿಮಿಟೆಡ್ ರೂ  382 ಕೋಟಿ ನಿವ್ವಳ ನಷ್ಟ ದಾಖಲಿಸಿದೆ.2004ರಿಂದ 2011ರ ಅವಧಿಯಲ್ಲಿ ಕಂಪೆನಿಯ ನಷ್ಟದ ಪ್ರಮಾಣ ಶೇ 16.77ರಷ್ಟು ತಗ್ಗಿದ್ದು, ಕಳೆದ ಎಂಟು ವರ್ಷಗಳಲ್ಲಿ ದಾಖಲಾಗಿರುವ ಕನಿಷ್ಠ ನಿವ್ವಳ ನಷ್ಟ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಕಂಪೆನಿ ರೂ  459 ಕೋಟಿ ನಿವ್ವಳ ನಷ್ಟ ದಾಖಲಿಸಿತ್ತು. ಮುಂದಿನ ಎರಡು ವರ್ಷಗಳಲ್ಲಿ ಉತ್ತಮ ಫಲಿತಾಂಶ ಲಭಿಸುವ ಸಾಧ್ಯತೆ ಇದೆ ಎಂದು `ಐಟಿಐ~ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್ ದಿಂಗ್ರಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry