ಶುಕ್ರವಾರ, ಮೇ 20, 2022
23 °C

ಐಟಿ:ಹೊಸ ಉದ್ಯೋಗ ಅವಕಾಶ ಸೃಷ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಉದ್ಯಮ ಉತ್ತಮ ಪ್ರಗತಿ ದಾಖಲಿಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2.25 ಲಕ್ಷ ಉದ್ಯೋಗಿಗಳು ಹೊಸದಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ವರ್ಷಾಂತ್ಯಕ್ಕೆ ಒಟ್ಟಾರೆ ‘ಐಟಿ’ ವರಮಾನ 72 ಶತಕೋಟಿ ಡಾಲರ್‌ಗಳನ್ನು (್ಙ 3,24,000 ಕೋಟಿ) ತಲುಪಬಹುದು ಎಂದು ಐಟಿ ಸಂಶೋಧನಾ ಸಂಸ್ಥೆ ‘ಡಿಲೈಟ್’ ಸಮೀಕ್ಷೆ ವರದಿ ತಿಳಿಸಿದೆ.ಮಾಹಿತಿ ತಂತ್ರಜ್ಞಾನ ಸೇವೆ ಮತ್ತು ಹೊರಗುತ್ತಿಗೆ ಮೂಲಕ  ಹರಿದುಬರುವ ವರಮಾನ 72 ಶತಕೋಟಿ ಡಾಲರ್‌ಗಳನ್ನು ತಲುಪಲಿದ್ದು, ದೇಶದ ಆರ್ಥಿಕ ವೃದ್ಧಿ ದರಕ್ಕೆ ಶೇ 5.8ರಷ್ಟು ಕೊಡುಗೆ ನೀಡಲಿದೆ. ‘ಐಟಿ’ ಕೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಖ್ಯೆಯೂ ಶೇ 22.3ರಷ್ಟು ಹೆಚ್ಚಲಿದೆ. ಹೆಚ್ಚುವರಿಯಾಗಿ 80 ಲಕ್ಷ ಅಬ್ಯರ್ಥಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದೂ  ಈ ಸಮೀಕ್ಷೆ ಹೇಳಿದೆ.ಜಾಗತಿಕ ಆರ್ಥಿಕ ಹಿಂಜರಿತದ ನಂತರ ಎಲ್ಲ ದೇಶಗಳು ಚೇತರಿಕೆಯ ಹಾದಿಯಲ್ಲಿರುವುದರಿಂದ ಟಾಟಾ ಕನ್ಸಲ್ಟನ್ಸಿ ಮತ್ತು ಇನ್ಫೋಸಿಸ್ ಈಗಾಗಲೇ ಹೊಸ ನೇಮಕಾತಿಗಳನ್ನು ನಡೆಸುವುದಾಗಿ ಪ್ರಕಟಿಸಿವೆ. ಸಾಂಪ್ರದಾಯಿಕ ಉತ್ತರ ಅಮೆರಿಕಕ್ಕೆ ಹೋಲಿಸಿದರೆ ಈ ವರ್ಷ ‘ಐಟಿ’ ಕಂಪೆನಿಗಳಿಗೆ ಹೆಚ್ಚಿನ ವರಮಾನ ಯೂರೋಪ್ ಮತ್ತು ಏಷ್ಯಾ ಮಾರುಕಟ್ಟೆಯಿಂದ ಹರಿದು ಬರಲಿದೆ.  ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಕ್ಷೇತ್ರದಿಂದ (ಎಸ್‌ಎಂಇ)  ದಾಖಲೆಯ ಪ್ರಗತಿ ನಿರೀಕ್ಷಿಸಲಾಗಿದೆ ಎಂದಿದೆ ಈ ವರದಿ. ತಂತ್ರಾಂಶ ರಫ್ತಿನ ಮೂಲಕವೇ 60 ಶತಕೋಟಿ ಡಾಲರ್ ವರಮಾನ ನಿರೀಕ್ಷಿಸಲಾಗಿದೆ.

ನೇರ ತೆರಿಗೆ ಸಂಗ್ರಹ ಹೆಚ್ಚಳ

ನವದೆಹಲಿ (ಪಿಟಿಐ): ನಿವ್ವಳ ನೇರ ತೆರಿಗೆ ಸಂಗ್ರಹ ಏಪ್ರಿಲ್-ಫೆಬ್ರುವರಿ ಅವಧಿಯಲ್ಲಿ ಶೇ 20.75ರಷ್ಟು ಹೆಚ್ಚಿದ್ದು, ್ಙ3,36,117 ಕೋಟಿಗಳಿಗೆ ಏರಿದೆ.  ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನೇರ ತೆರಿಗೆಯ ಮೂಲಕ ರೂ 2,78,411ಕೋಟಿ ಸಂಗ್ರಹಿಸಲಾಗಿತ್ತು. ಪ್ರಸಕ್ತ ಅವಧಿಯಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ ಶೇ 24ರಷ್ಟು ವೃದ್ಧಿ ಕಂಡಿದೆ. ಈ ಮೂಲಕ     ರೂ 22,3612 ಕೋಟಿ ಸಂಗ್ರಹವಾಗಿದೆ. ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ    ರೂ 1,12,114 ಕೋಟಿ ತಲುಪಿದ್ದು, ಶೇ 14.76ರಷ್ಟು ಪ್ರಗತಿ ದಾಖಲಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಮೂಲಕ  ಸಂಗ್ರಹವಾಗುವ ವರಮಾನ ಕಳೆದ 11 ತಿಂಗಳಲ್ಲಿ ಶೇ 1.72ರಷ್ಟು ಹೆಚ್ಚಿದ್ದು,ರೂ 6,078 ಕೋಟಿಗೆ ಏರಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿರೂ 4,46,000 ಕೋಟಿ ನೇರ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಶೇ 75.38ರಷ್ಟನ್ನು ಈಗಾಗಲೇ ತಲುಪಲಾಗಿದೆ. ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಉದ್ದೇಶಿತ ಗುರಿ ತಲುಪಲು ರೂ 1.10 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಬೇಕಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಕುಸಿತಕ್ಕೆ ಕಳವಳ

ನವದೆಹಲಿ, (ಪಿಟಿಐ): ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನಿಂದ ಗ್ರಾಹಕರು ಇತರೆ ಖಾಸಗಿ ಮೊಬೈಲ್ ಸೇವೆಗಳಿಗೆ ಬದಲಿಸಿಕೊಳ್ಳುತ್ತಿರುವುದಕ್ಕೆ ರಾಜ್ಯಸಭೆಯಲ್ಲಿ ಕಳವಳ ವ್ಯಕ್ತವಾಗಿದೆ.ರಾಜ್ಯಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಎಐಎಡಿಎಂಕೆಯ ಎ. ಇಳವರಸನ್, ನೆಟ್‌ವರ್ಕ್ ಸಮಸ್ಯೆ ಮತ್ತು ಇತರೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಎಸ್‌ಎನ್‌ಎಲ್‌ನ 2.2 ಲಕ್ಷಕ್ಕೂ ಹೆಚ್ಚು ಮತ್ತು ಎಂಟಿಎನ್‌ಎಲ್‌ನ 14,000ದಷ್ಟು ಗ್ರಾಹಕರು ಇತರೆ ಮೊಬೈಲ್‌ಗಳಿಗೆ ವರ್ಗಾವಣೆ ಹೊಂದಿದ್ದಾರೆ ಎಂದರು.ಗ್ರಾಹಕರು ಈ ರೀತಿ  ವರ್ಗಾವಣೆ ಹೊಂದುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್‌ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕಾಗಿದೆ ಎಂದರು.ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.