ಐ.ಟಿ ದಾಳಿ ರಾಜಕೀಯ ಪ್ರೇರಿತ: ನಮೋಶಿ

ಗುರುವಾರ , ಜೂಲೈ 18, 2019
23 °C

ಐ.ಟಿ ದಾಳಿ ರಾಜಕೀಯ ಪ್ರೇರಿತ: ನಮೋಶಿ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ (ಎಚ್‌ಕೆಇಎಸ್)ಯ ಕಾಲೇಜು, ಆಸ್ಪತ್ರೆ ಮತ್ತು ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳ ಮನೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ರಾಜಕೀಯ ಪ್ರೇರಿತವಾದದ್ದು ಎಂದು ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಆರೋಪಿಸಿದ್ದಾರೆ.

ಸಂಸ್ಥೆಯೊಳಗಿನ ಕೆಲ ಸದಸ್ಯರು ಮತ್ತು ತಮ್ಮ ಏಳಿಗೆ ಸಹಿಸದ ಕೆಲವರ ಪಿತೂರಿಯಿಂದ ದಾಳಿ ನಡೆದಿದೆ ಎಂದು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದ ಅವರು, ನಾಲ್ಕು ವರ್ಷಗಳಿಂದ ನಾನು ಸಂಸ್ಥೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಬೆಳೆಯುತ್ತಿರುವ ಸಂಸ್ಥೆಗೆ ಅವಕಾಶ ನೀಡುವುದು ಬಿಟ್ಟು ಈ ರೀತಿ ಮಾಡುವುದರಿಂದ ಯಾರಿಗೂ ಲಾಭವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ದೊಡ್ಡ ಸಂಸ್ಥೆ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಸರ್ಕಾರ ಸರಿಯಾದ ನೀತಿ, ನಿಯಮ ರಚಿಸಿ ಸಂಸ್ಥೆ ಬೆಳೆಯಲು ಅವಕಾಶ ನೀಡಿದರೆ ಸಂಸ್ಥೆಯ ಆಸ್ಪತ್ರೆಗಳ ಮೂಲಕ ಗ್ರಾಮೀಣ ಜನರಿಗೆ ಸೇವೆ ಒದಗಿಸಲು ಸಾಧ್ಯ. ಅದು ಬಿಟ್ಟು ಇಂತಹ ದಾಳಿ ನಡೆಸುವುದು ಸರಿಯಲ್ಲ. ಆದಾಯ ತೆರಿಗೆ ಅಧಿಕಾರಿಗಳ ತನಿಖೆಗೆ ಸಹಕರಿಸುವುದಾಗಿಯೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry