ಐ.ಟಿ, ಬಿ.ಟಿ: ಅನಿವಾಸಿ ಹೂಡಿಕೆಗೆ ಉತ್ತೇಜನ

7

ಐ.ಟಿ, ಬಿ.ಟಿ: ಅನಿವಾಸಿ ಹೂಡಿಕೆಗೆ ಉತ್ತೇಜನ

Published:
Updated:

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಲಾಗುವುದು ಎಂದು ಐ.ಟಿ, ಬಿ.ಟಿ ಸಚಿವ ಎಸ್.ಆರ್. ಪಾಟೀಲ ಅವರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಭರವಸೆ ನೀಡಿದ್ದಾರೆ.ಅನಿವಾಸಿ ಕನ್ನಡಿಗರ ವೇದಿಕೆ `ನಾವಿಕ'  ಬಾಸ್ಟನ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸಚಿವರು ಸಮಾವೇಶದಲ್ಲಿ ಪಾಲ್ಗೊಂಡಿಲ್ಲ. ಆದರೆ ಅವರ ಭಾಷಣದ ವಿಡಿಯೋವನ್ನು ಅಲ್ಲಿ ಬಿತ್ತರಿಸಲಾಯಿತು. ರಾಜ್ಯದ ಎರಡನೆಯ ಮತ್ತು ಮೂರನೆಯ ಹಂತದ ನಗರಗಳಲ್ಲೂ ಐಟಿ ಹಾಗೂ ಬಿಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.`ದೂರದ ಊರಿನಲ್ಲಿದ್ದರೂ ಕನ್ನಡದ ತೇರು ಎಳೆಯುತ್ತಿರುವ ನಿಮಗೆ ಕೋಟಿ ನಮನಗಳು' ಎಂದು ಸಚಿವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry