ಮಂಗಳವಾರ, ನವೆಂಬರ್ 12, 2019
20 °C

ಐಡಿಎಸ್ ನೆಕ್ಸ್ಟ್‌ಜತೆ ಆರ್ಕ್‌ಪ್ಲಾನ್ ಮೈತ್ರಿ

Published:
Updated:

ಬೆಂಗಳೂರು: ಹೋಟೆಲ್ ಉದ್ಯಮಕ್ಕೆ `ಬಿಜಿನೆಸ್ ಇಂಟಲಿಜೆನ್ಸ್ ಸಲ್ಯೂಷನ್ಸ್' (ಬಿಎಸ್‌ಐ) ತಂತ್ರಾಂಶ ಒದಗಿಸುವ ಸಲುವಾಗಿ `ಐಡಿಎಸ್ ನೆಕ್ಸ್ಟ್' ಮತ್ತು `ಆರ್ಕ್‌ಪ್ಲಾನ್' ಮೈತ್ರಿ ಮಾಡಿಕೊಂಡಿವೆ.ಐಡಿಎಸ್ ನೆಕ್ಸ್ಟ್ ಕಂಪೆನಿ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಏಷ್ಯಾ ಫೆಸಿಫಿಕ್, ಆಫ್ರಿಕಾದ 40 ದೇಶಗಳ 3200ಕ್ಕೂ ಹೆಚ್ಚು ಗ್ರಾಹಕ ಕಂಪೆನಿಗಳನ್ನು ಹೊಂದಿದೆ. ಈ ಕಂಪೆನಿಗಳಿಗೆ ಕೈಗೆಟಕುವ ದರದಲ್ಲಿ `ಬಿಎಸ್‌ಐ'  ತಂತ್ರಾಂಶ ಒದಗಿಸಲಾಗು ವು ದೆಂದು `ಆರ್ಕ್‌ಪ್ಲಾನ್' ಉಪಾಧ್ಯಕ್ಷ ರಘುನಾಥನ್ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)