ಐತಿಹಾಸಿಕ ತಾಣಗಳ ವೀಕ್ಷಣೆಗೆ ಚಾಲನೆ

7

ಐತಿಹಾಸಿಕ ತಾಣಗಳ ವೀಕ್ಷಣೆಗೆ ಚಾಲನೆ

Published:
Updated:

ಮಾಲೂರು:  ಜಿಲ್ಲೆಯಲ್ಲಿರುವ ಐತಿ ಹಾಸಿಕ ತಾಣಗಳ ವೀಕ್ಷಣೆಯಿಂದ ಸುತ್ತಮುತ್ತಲಿನ ಊರಿನ ಪರಿಚಯದ ಜತೆ ಹಿನ್ನೆಲೆಯನ್ನು ಅರಿಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ತಿಳಿಸಿದರು.ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಚಿಣ್ಣರ 2 ದಿನಗಳ ಜಿಲ್ಲಾ ದರ್ಶನ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕಿನಿಂದ 50 ವಿದ್ಯಾರ್ಥಿಗಳಂತೆ 13 ತಂಡಗಳಲ್ಲಿ ಹಂತ ಹಂತವಾಗಿ ಡಿಸೆಂಬರ್ ತಿಂಗಳಾಂತ್ಯದಲ್ಲಿ  ಐತಿಹಾಸಿಕ ತಾಣಗಳ ಪರಿಚಯದಿಂದ ಪಠ್ಯಕ್ಕೆ ಪೂರ್ವಕವಾದ ಅಂಶಗಳ ಅಧ್ಯಯನಕ್ಕೆ ಸಹಾಯಕವಾಗಲಿದೆ ಎಂದರುಪ್ರತಿ ವಿದ್ಯಾರ್ಥಿಗಳು ತಾವು ವೀಕ್ಷಣೆ ಮಾಡಿದ ಸ್ಥಳದ ಬಗ್ಗೆ ಪ್ರವಾಸದ ನಂತರ ಸಂಕ್ಷಿಪ್ತ ವರದಿಯನ್ನು  ಮುಖ್ಯ ಶಿಕ್ಷಕರ ಮುಖಾಂತರ ಬಿಆರ್‌ಸಿ  ಕೇಂದ್ರಕ್ಕೆ ನೀಡಿದರೆ ಅತ್ಯುತ್ತಮ ವರದಿಗೆ ಬಹುಮಾನ ಸಹ ನೀಡಲಾಗುವುದು ಎಂದರು.ಬಿಆರ್‌ಸಿ ಕೆಂಪಯ್ಯ, ಇಸಿಒ ಗಂಗಾಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿ ನಾರಾಯಣಪ್ಪ, ಕಾರ್ಯದರ್ಶಿ ನರಸಿಂಹ ಹಾಗೂ ಮುಖಂಡ ಎಂ.ಜಿ. ನರಸಿಂಹರಾವ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry