ಶನಿವಾರ, ನವೆಂಬರ್ 23, 2019
18 °C

ಐದು ಕಾಲಿನ ಕರು ಜನನ

Published:
Updated:

ಸಂತೇಬೆನ್ನೂರು: ಇಲ್ಲಿಗೆ ಸಮೀಪದ ಕೋಗಲೂರಿನ ರೈತರೊಬ್ಬರ ಮನೆಯಲ್ಲಿ ಸೋಮವಾರ ಹಸು ಐದು ಕಾಲಿನ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಕರುವಿನ ಬೆನ್ನಹುರಿಯ ಮಧ್ಯ ಭಾಗದಲ್ಲಿ ಐದನೇ ಕಾಲು ಕಾಣಿಸಿಕೊಂಡಿದೆ. ಗೊರಸು ಮಾತ್ರ ಸಧೃಡವಾಗಿದೆ, ಆದರೆ, ತೊಡೆ ಭಾಗದ ಮಾಂಸ ಖಂಡಗಳ ದೌರ್ಬಲ್ಯದಿಂದ ಕಾಲು ದೇಹದ ಒಂದು ಮಗ್ಗುಲಿಗೆ ಒರಗಿಕೊಂಡಿದೆ.ಕರು ಆರೋಗ್ಯದಿಂದಿದೆ. ಬೆಳವಣಿಗೆ ಹೊಂದುವ ಲಕ್ಷಣಗಳಿವೆ ಎನ್ನುತ್ತಾರೆ ಗ್ರಾಮದ ಎಂ.ಆರ್. ರಾಜಶೇಖರ್.`ಬೆನ್ನಹುರಿಯ ಮೇಲೆ ಐದನೇ ಕಾಲು ಇದ್ದು ಅದನ್ನು ಆಪರೇಷ ಮೂಲಕ ತೆಗೆದಲ್ಲಿ ಮುಖ್ಯ ನರಗಳಗೆ ಹಾನಿ ಸಂಭವಿಸಿ ಕರು ಸಾಯಬಹುದು. ಕರು ಈಗಿರುವ ಸ್ಥಿತಿಯಲ್ಲಿಯೇ ಬೆಳೆಯಲಿ. ಸಮಸ್ಯೆಯಾಗದು. ಎನ್ನುತ್ತಾರೆ' ಹಿರೇ ಕೋಗಲೂರಿನ ಪಶು ವೈದ್ಯಾಧಿಕಾರಿ ಗಿರೀಶ್.

ಪ್ರತಿಕ್ರಿಯಿಸಿ (+)