ಶನಿವಾರ, ನವೆಂಬರ್ 16, 2019
22 °C

ಐದು ಕಾಲಿನ ಕರು ಜನನ!

Published:
Updated:

ಸಂತೇಬೆನ್ನೂರು: ಇಲ್ಲಿಗೆ ಸಮೀಪದ ಕೋಗಲೂರಿನ ರೈತರೊಬ್ಬರ ಮನೆಯಲ್ಲಿ ಸೋಮವಾರ ಹಸು ಐದು ಕಾಲಿನ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಕರು ಆರೋಗ್ಯದಿಂದಿದೆ. ಎಲ್ಲಾ ಕರುವಿನಂತೆ ಬೆಳವಣಿಗೆ ಹೊಂದುವ ಲಕ್ಷಣಗಳಿವೆ ಎನ್ನುತ್ತಾರೆ ಗ್ರಾಮದ ಎಂ.ಆರ್. ರಾಜಶೇಖರ್.

`ಬೆನ್ನಹುರಿಯ ಮೇಲೆ ಐದನೇ ಕಾಲು ಇದೆ. ಅದನ್ನು ಆಪರೇಷನ್ ಮೂಲಕ ತೆಗೆದಲ್ಲಿ ಮುಖ್ಯ ನರಗಳಿಗೆ ಹಾನಿ ಸಂಭವಿಸಿ ಕರು ಮೃತವಾಗಬಹುದುಕರು ಈಗಿರುವ ಸ್ಥಿತಿಯಲ್ಲಿಯೇ ಬೆಳೆಯಲಿ. ಮುಂದೆ ಯಾವ ಸಮಸ್ಯೆಯೂ ಎದುರಾಗದು. ಇಂತಹ ಹಲವಾರು ಕರುಗಳು ಜನಿಸಿ ದೊಡ್ಡ ರಾಸುಗಳಾಗಿ ಆರೋಗ್ಯದಿಂದ ಇವೆ ಎಂದು ಪಶು ವೈದ್ಯಾಧಿಕಾರಿ ಗಿರೀಶ್ ತಿಳಿಸಿದರು.

ಪ್ರತಿಕ್ರಿಯಿಸಿ (+)