ಐದು ತಾಸು ಕರ್ಫ್ಯೂ ಸಡಿಲ

7
ಮುಜಾ­ಫರ್‌­ನಗರ ಗಲಭೆ

ಐದು ತಾಸು ಕರ್ಫ್ಯೂ ಸಡಿಲ

Published:
Updated:

ಲಖನೌ/ ನವದೆಹಲಿ (ಪಿಟಿಐ): ಗಲಭೆಗ್ರಸ್ತ ಮುಜಾ­ಫರ್‌­ನಗರದಲಿ್ಲ ಪರಿಸ್ಥಿತಿ ಸುಧಾರಿಸು­ತ್ತಿದ್ದು,,  ಬುಧವಾರ ಐದು ತಾಸು ಕರ್ಫ್ಯೂ ಸಡಿಲಿಸಲಾಗಿತ್ತು. ಆದರೆ ಭಾಗ್‌ಪತ್‌­ನಲ್ಲಿ ಹಿಂಸಾಚಾರ ನಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಗಾಯಗೊಂಡಿದ್ದಾರೆ.ಮಧಾ್ಯಹ್ನ 12ರಿಂದ ಸಂಜೆ 5 ಗಂಟೆ­ಯ­ವರೆಗೆ ಕರ್ಫ್ಯೂ ಸಡಿಲಿಸಲಾಗಿತು್ತ. ಪರಿಸಿ್ಥಿತಿ ಈಗ ನಿಯಂತ್ರಣದಲಿ್ಲರುವು­ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಪಿಐಎಲ್‌ ವಿಚಾರಣೆಗೆ ಸುಪ್ರೀಂ ಅಸು್ತ: ಮುಜಾಫರ್‌­ನಗರ ಗಲಭೆ ಬಗೆ್ಗ ಸಿಬಿಐ ತನಿಖೆ ಕೋರಿ ಸಲಿ್ಲಸಿದ ಸಾರ್ವಜನಿಕ ಹಿತಾಸಕಿ್ತ ಅರ್ಜಿ­ಯನು್ನ ತುರ್ತಾಗಿ ವಿಚಾ­ರಣೆಗೆ ಕೈಗೆತಿ್ತ­ಕೊಳ್ಳಲು ಸುಪ್ರೀಂ­ಕೋರ್ಟ್ ಬುಧವಾರ ಒಪಿ್ಪಗೆ ಸೂಚಿಸಿದೆ.  ನ್ಯಾಯಮೂರ್ತಿ ಜಿ.ಎಸ್‌. ಸಿಂಘಿ್ವ ಅವರ ನೇತೃತ್ವದ ನ್ಯಾಯ ಪೀಠವು ಗುರು­ವಾರ ಅರ್ಜಿಯ ವಿಚಾರಣೆ ನಡೆಸಲಿದೆ.ಗಲಭೆಗೆ ಕಾರಣ ಹುಡುಕಲು ಮತು್ತ ಹಿಂಸಾಚಾರ ನಿಯಂತಿ್ರಸಿ ತೊಂದರೆಗೆ ಸಿಲುಕಿದ ಜನರಿಗೆ ಅಗತ್ಯ ರಕ್ಷಣೆ ಒದಗಿ­ಸಲು ಕೇಂದ್ರ ಮತು್ತ ಉತ್ತರಪ್ರದೇಶ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮೊಹಮ್ಮದ್‌ ಹರೂನ್‌ ಮತಿ್ತತ­ರರು ಈ ಪಿಐಎಲ್‌ ಅರ್ಜಿ ಸಲಿ್ಲಸಿದ್ದಾರೆ.ಶಿಂಧೆ ಶಂಕೆ: ಉತ್ತರಪ್ರದೇಶದ ಮುಜಾಫರ್‌ನಗರದಲಿ್ಲ ನಡೆದಹಿಂಸಾ­ಚಾರದ ಹಿಂದೆ ಕೆಲ ರಾಜಕೀಯ ಪಕ್ಷ­ಗಳ ಕೈವಾಡದ ಶಂಕೆಯನು್ನ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಬುಧ­ವಾರ ವ್ಯಕ್ತಪಡಿಸಿದರು.2014ರ ಲೋಕಸಭಾ ಚುನಾವಣೆ ಮುನ್ನ ದೇಶದಲಿ್ಲ ಇನ್ನಷು್ಟ ಕೋಮುಗಲಭೆ ನಡೆಯುವ ಸಾಧ್ಯತೆ ಯನು್ನ ತಳಿ್ಳ­ಹಾಕಲಾಗದು. ಈಗಾಗಲೇ ಕೇಂದ್ರ ಗೃಹ ಸಚಿವಾಲಯ 7 ರಾಜ್ಯ ಗಳಿಗೆ ಮುನೆ್ನ­ಚ್ಚ­ರಿಕೆ ನೀಡಿದೆ ಎಂದು ಅವರು ಸುದಿ್ದ­ಗಾ­ರ­ರಿಗೆ ತಿಳಿಸಿದರು.ಪರಿಹಾರ ಮೊತ್ತ ರೂ10 ಲಕ್ಷಕ್ಕೆ ಏರಿಕೆ: ಮುಜಾ­ಫ­ರ್‌­­­ನಗರ ಕೋಮು ಗಲಭೆ ಯಲಿ್ಲ ಮೃತ­ಪಟ್ಟವರ ಕುಟುಂಬ ಗಳಿಗೆ ಉತ್ತರಪ್ರದೇಶ ಸರ್ಕಾರ ರೂ 10 ಲಕ್ಷ ಪರಿ­ಹಾರವನು್ನ ಬುಧವಾರ ಪ್ರಕಟಿಸಿದೆ.ಈ ಹಿಂದೆ, ರಾಜ್ಯ ಸರ್ಕಾರವು ಮೃತ ಟಿವಿ ಪತ್ರಕರ್ತನ ಕುಟುಂಬಕೆ್ಕ ಹತು್ತ ಲಕ್ಷ ಮತು್ತ ಇತರರಿಗೆ ರೂ 5 ಲಕ್ಷ ಪರಿಹಾರ ಘೋಷಿಸಿತು್ತ. ಆದರೆ ಸಾವಿನ ಸಂಖೆ್ಯ ಹೆಚಿ್ಚದ ಹಿನೆ್ನಲೆಯಲಿ್ಲ ಎಲ್ಲ­ರಿಗೂ ಪರಿ­ಹಾರ ಮೊತ್ತವನು್ನ ಹೆಚಿ್ಚ­ಸಿದೆ. ಇದಲ್ಲದೆ, ಗಂಭೀರ­ವಾಗಿ ಗಾಯ­ಗೊಂಡವ­ರಿಗೆ ರೂ 50 ಸಾವಿರ ಪರಿ­ಹಾರ ನೀಡಿದೆ.ಯುಪಿಎ ವಿರುದ್ಧ ಎಸ್‌ಪಿ ವಾಗ್ದಾಳಿ (ಆಗ್ರಾ ವರದಿ): ದೇಶವು ಕಳೆದ ಹತು್ತ ವರ್ಷಗಳಲಿ್ಲ ಜಗತಿ್ತನ ಬೇರಾವ ರಾಷ್ಟ್ರ ಕಾಣದಷು್ಟ ಕೆಟ್ಟ ಪರಿಸಿ್ಥತಿಯನು್ನ ಕಂಡಿದೆ ಎಂದು ಎಸ್‌.ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಬುಧ­ವಾರ ಇಲಿ್ಲ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ­ಯಲಿ್ಲ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜನತೆ ಈಗ ಕೇಂದ್ರದಲಿ್ಲ ಪರ್ಯಾಯ ಸರ್ಕಾರ ಬರುವುದನು್ನ ಬಯಸಿದೆ’ ಎಂದು ಹೇಳಿದರು.ಆಜಂಖಾನ್‌ ಗೈರು: ಈ ಮಧೆ್ಯ, ಪಕ್ಷದ ಹಿರಿಯ ಮುಸಿ್ಲಂ ನಾಯಕ ಆಜಂ ಖಾನ್‌ ಈ ಸಭೆಯಿಂದ ಹೊರಗುಳಿದಿ ದ್ದಾರೆ. ಆದರೆ ‘ಇದಕೆ್ಕ ಹೆಚಿ್ಚನ ಮಹತ್ವ ನೀಡಬೇಕಿಲ್ಲ. ಗೈರು ಹಾಜರಾದವರಲಿ್ಲ ಆಜಂ ಮಾತ್ರವಲ್ಲ­ವಲ್ಲದೆ ಇತರ ಮುಖಂಡರೂ ಇದ್ದಾರೆ’ ಎಂದು ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌­ಗೋಪಾಲ್‌ ಯಾದವ್‌ ಸುದಿ್ದ­ಗಾರರ ಪ್ರಶೆ್ನಗೆ ಪ್ರತಿಕಿ್ರಯಿಸಿ­ದ್ದಾರೆ.ಮೂಲಗಳ ಪ್ರಕಾರ, ಅಯೋಧೆ್ಯ ಯಾತೆ್ರ ಕೈಗೊಂಡ ವಿಎಚ್‌ಪಿ ನಾಯಕ ಅಶೋಕ್‌ ಸಿಂಘಾಲ್‌ ಮತಿ್ತತರರನು್ನ ಮುಲಾ­ಯಂ ಭೇಟಿ ಮಾಡಿರುವುದು ಮತು್ತ ಮುಜಾಫರ್‌ನಗರ ಗಲಭೆ

ತಡೆ­ಯಲು ರಾಜ್ಯ ಸರ್ಕಾರದ ವೈಫಲ್ಯ ಕುರಿತು ಆಜಂ ಅಸಮಾಧಾನ ಹೊಂದಿ­ದ್ದಾರೆ ಎನ್ನಲಾಗಿದೆ.ಈ ಘಟನೆಗಳು ಮುಲಾಯಂ ಅವರು ಮುಸ್ಲಿಂ ಧಾರ್ಮಿಕ ಮುಖಂಡ ರಲ್ಲದೆ, ಪಕ್ಷದೊಳಗಿನ ಮುಸಿ್ಲಂ ನಾಯಕ ರಿಂದಲೂ ವಿರೋಧ ಎದುರಿಸ­ಬೇಕಾದ ಸಂದಿಗ್ಧ ಪರಿಸ್ಥಿತಿ ಸೃಷ್ಟಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry