ಐದು ದಿನ ಅಚಾನಕ್

ಗುರುವಾರ , ಜೂಲೈ 18, 2019
24 °C

ಐದು ದಿನ ಅಚಾನಕ್

Published:
Updated:

ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್, ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ : ರಂಗಜಾಗೃತಿ ಕಾರ್ಯಕ್ರಮದ ಅಂಗವಾಗಿ ಸೋಮವಾರದಿಂದ ಜೂನ್ 24ರ ವರೆಗೆ  `ಅಚಾನಕ್~ (ನಿರ್ದೇಶನ, ರಚನೆ, ವಿನ್ಯಾಸ: ಅಶೋಕ ನಿಟ್ಟೂರು) ಕನ್ನಡ ನಗೆ ನಾಟಕ.



ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದರ ಮನೆಯಲ್ಲಿ ಏಕಾಏಕಿ ಸಮಾಜ ವಿರೋಧಿ ಕೃತ್ಯವೊಂದು ನಡೆಯುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಆತಂಕ, ಭಯ, ಯಾತನೆಯ ಮುಖವನ್ನು ನಾಟಕ ಹಾಸ್ಯದೊಂದಿಗೆ ವಿವರಿಸುತ್ತ ಹೋಗುತ್ತದೆ. ಇಡೀ ಘಟನೆ ನಡೆಯುವುದು ಜೋಡಿ ಮನೆಯೊಂದರಲ್ಲಿ.



ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್ ಅನೇಕ ವರ್ಷಗಳಿಂದ ರಂಗ ಚಟುವಟಿಕೆ ನಡೆಸಿಕೊಂಡು, ಲಲಿತ ಕಲೆಗಳೊಂದಿಗೆ ರಂಗಭೂಮಿಯ ಶಿಕ್ಷಣವನ್ನೂ ನೀಡುತ್ತ ಬಂದಿದೆ. ನೂರಾರು ಮಕ್ಕಳು ಯುವಕ, ಯುವತಿಯರು ಇಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.



ಈಗ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಮಕ್ಕಳಿಗೆ ರಂಗಭೂಮಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ `ರಂಗ ಜಾಗೃತಿ~ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಮಕ್ಕಳಲ್ಲಿ ಸುಲಭವಾಗಿ ರಂಗ ಅರಿವು ಮೂಡಿಸಲು, 20 ನಿಮಿಷಗಳ ನಾಟಕ ಪ್ರದರ್ಶನ ಹಾಗೂ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸಂವಾದ ಇರುತ್ತದೆ. ಆಸಕ್ತಿ ಉಳ್ಳ ಶಾಲೆಗಳಲ್ಲಿ ವಾರಾಂತ್ಯ ರಂಗ ತರಬೇತಿ ನಡೆಸಲಿದೆ.



ಸೋಮವಾರ ಸಂಜೆ 6.30ಕ್ಕೆ ಈ ರಂಗಶಿಬಿರದ ಉದ್ಘಾಟನೆ: ಬಿ.ವಿ.ರಾಜಾರಾಂ. ಅತಿಥಿ: ರಂಗ ಸಂಗೀತ ನಿರ್ದೇಶಕ ಇಸ್ಮಾಯಿಲ್ ಗೋನಾಳ್. ನಂತರ ನಾಟಕ. ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, 151, 7ನೇ ಕ್ರಾಸ್ ಶಿಕ್ಷಕರ ಕಾಲೋನಿ 1ನೇ ಹಂತ, ಕುಮಾರಸ್ವಾಮಿ ಲೇಔಟ್. ನಿತ್ಯ ಸಂಜೆ 7. ಮಾಹಿತಿಗೆ ಗೋಪಿನಾಥ್: 92425 23523, 93412 13345, 92434 22349.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry