ಶನಿವಾರ, ನವೆಂಬರ್ 16, 2019
22 °C

ಐದು ಮಾರಕ ರೋಗ ತಡೆ: ಚುಚ್ಚುಮದ್ದು ಹಾಕಿಸಲು ಸಲಹೆ

Published:
Updated:

ದೇವದುರ್ಗ: ಹುಟ್ಟಿದ 45 ದಿನಗಳಿಂದ ಮೂರುವರೆ ತಿಂಗಳ ಮಗುವಿಗೆ ಹರಡಲಿರುವ ಐದು ಮಾರಕ ರೋಗಳ ತಡೆಗೆ ಫೆನಟಾ ವಾಲೆಂಟ್ ಎಂಬ ಹೊಸ ಚುಚ್ಚುಮದ್ದನ್ನು ತಾಯಿಂದಿರುವ ಮಕ್ಕಳಿಗೆ ಹಾಕಿಸಬೇಕೆಂದು ವೈದ್ಯಾಧಿಕಾರಿ ಡಾ.ಪ್ರತಿಮಾ ಪಾಟೀಲ ಹೇಳಿದರು.ತಾಲ್ಲೂಕಿನ ಗಬ್ಬೂರು ಗ್ರಾಮದ ಚಲುವಾದಿ ಓಣಿಯಲ್ಲಿ ಬರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಸಿಲಾಗಿದ್ದ ಸರಳ ಸಮಾರಂಭದಲ್ಲಿ ಹೊಸದಾಗಿ ಬಂದಿರುವ ಚುಚ್ಚುಮದ್ದಿನ ಬಗ್ಗೆ ತಾಯಿಂದಿರಿಗೆ ಪರಿಚಯ ಮಾಡಿಕೊಟ್ಟರು.ಹುಟ್ಟಿದ ಮಗುವಿಗೆ ಹರಡುವ ಕೆಮ್ಮು, ಕಾಮಲೆ, ಗಂಟಲು ನೋವು ಸೇರಿದಂಥೆ ಒಟ್ಟು ಐದು ಮಾರಕ ಕಾಯಿಲೆಗಳನ್ನು ಬರದಂಥೆ ಫೆನಟಾ ವಾಲೆಂಟ್ ಎಂಬ ಚುಚ್ಚುಮದ್ದು ಮಗುವಿಗೆ ಉಪಯೋಗವಾಗುತ್ತಿದ್ದು, ಇದನ್ನು ಪ್ರತಿಯೊಬ್ಬ ತಾಯಿಂದಿರು ನಿಮ್ಮ ಸಮೀಪದ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಹಾಯಕ ಹತ್ತಿರ ಕೇಳಿ ಹಾಕಿಸಿಕೊಳ್ಳಲು ಹೇಳಿದರು.ಹುಟ್ಟಿದ ಮಗುವಿಗೆ ಒಂದುವರೆ ತಿಂಗಳು, ಎರಡೂವರೆ ತಿಂಗಳು ಮತ್ತು ಮೂರುವರೆ ತಿಂಗಳಲ್ಲಿ ಸದರಿ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಇಲಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ವಿರಜಾ, ಆಶಾ ಕಾರ್ಯಕರ್ತೆ ಗಿರಿಜಾ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆಯ ಸಂಗಮ್ಮ ಹಾಗೂ ಗ್ರಾಮದ ತಾಯಿಂದಿರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)