ಐದು ವರ್ಷಕ್ಕಿಂತ ಹೆಚ್ಚು ಸೇವೆಯವರಿಗೆ ಗ್ರಾಚ್ಯುಟಿ

7

ಐದು ವರ್ಷಕ್ಕಿಂತ ಹೆಚ್ಚು ಸೇವೆಯವರಿಗೆ ಗ್ರಾಚ್ಯುಟಿ

Published:
Updated:

ಮದುರೆ (ಪಿಟಿಐ): ಸಂಸ್ಥೆಯೊಂದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಸೇವೆ ಸಲ್ಲಿಸಿದ ಪ್ರತಿಯೊಬ್ಬ ನೌಕರನೂ ಗ್ರಾಚ್ಯುಟಿ ಪಡೆಯಲು ಅರ್ಹನಾಗಿದ್ದು, ನಿವೃತ್ತಿ, ರಾಜೀನಾಮೆ ಅಥವಾ ಮರಣ ಸೇರಿದಂತೆ ಸೇವೆಯಿಂದ ಯಾವುದೇ ರೀತಿ ಹೊರಬಂದರೂ, ಈ ಸೌಲಭ್ಯ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಪೀಠ ಬುಧವಾರ ಮಹತ್ವದ ತೀರ್ಪು ನೀಡಿದೆ.ನ್ಯಾಯಮೂರ್ತಿ ಕೆ. ಚಂದ್ರು ಅವರ ನ್ಯಾಯಪೀಠವು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಚೇರಿ ಸಹಾಯಕನೊಬ್ಬನನ್ನು ಕಡ್ಡಾಯ ನಿವೃತ್ತಿಗೊಳಿಸಿ, ಆತನ  ಗ್ರಾಚ್ಯುಟಿ ತಡೆಹಿಡಿಯಲು ಅನುಮತಿ ಕೋರಿ ಶ್ರೀರಂಗಂ ಸಹಕಾರ ಪಟ್ಟಣ ಬ್ಯಾಂಕ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿ ಈ ಆದೇಶ ಹೊರಡಿಸಿದೆ. `ಆತನ ವಿರುದ್ಧ ಅಪರಾಧ ಪ್ರಕರಣವಿದ್ದ ಮಾತ್ರಕ್ಕೆ ಗ್ರಾಚ್ಯುಟಿಯನ್ನು ತಡೆಹಿಡಿಯಲಾಗದು~ ಎಂದೂ ಪೀಠ ಸ್ಪಷ್ಟಪಡಿಸಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry